ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಝೀರೋ’ ಚಿತ್ರದಲ್ಲಿ ಸಿಖ್‌ ಭಾವನೆಗಳಿಗೆ ನೋವು ಆರೋಪ: ಶಾರುಖ್‌ ವಿರುದ್ಧ ದೂರು

Last Updated 5 ನವೆಂಬರ್ 2018, 13:47 IST
ಅಕ್ಷರ ಗಾತ್ರ

ನವದೆಹಲಿ:‘ಝೀರೋ’ ಚಿತ್ರದಲ್ಲಿ ಸಿಖ್‌ ಸಮಾಜದ ಜನರ ಭಾವನೆಗಳಿಗೆ ನೋವು ಮಾಡಲಾಗಿದೆ ಎಂದು ಆರೋಪಿಸಿ ಈ ಚಿತ್ರದಲ್ಲಿ ಅಭಿನಯಿಸಿರುವ ನಟ ಶಾರುಖ್‌ ಖಾನ್‌ ಹಾಗೂ ಇತರರ ವಿರುದ್ಧ ಕ್ರಿಮಿನಲ್‌ದೂರುದಾಖಲಾಗಿದೆ.

ದೆಹಲಿಯ ಅಕಾಲಿ ದಳದ ಶಾಸಕ ಮಂಜಿಂದರ್‌ ಸಿಂಗ್‌ ಸಿರ್ಸಾ ಅವರು ಈ ಸಂಬಂಧ ಶಾರುಖ್‌ ವಿರುದ್ಧ ದೂರು ನೀಡಿದ್ದಾರೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಹೆಚ್ಚುಕಮ್ಮಿ ಒಂದು ವರ್ಷಕ್ಕೂ ಅಧಿಕ ಕಾಲ ಬ್ರೇಕ್ ತೆಗೆದುಕೊಂಡಿದ್ದ ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಬಹು ನಿರೀಕ್ಷಿತ ಸಿನಿಮಾ ‘ಝೀರೋ’ದ ಮೂಲಕ ತೆರೆಗೆ ಬರಲು ಸಜ್ಜಾಗತ್ತಿದ್ದು, ಈಚೆಗೆ ಬಿಡುಗಡೆಯಾದ ಅದರ ಟ್ರೇಲರ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದರ ಬೆನ್ನಲ್ಲೇ ದೂರು ಕೇಳಿಬಂದಿದೆ.

ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು(ನ.2) 3 ನಿಮಿಷ 15 ಸೆಕೆಂಡ್‌ವುಳ್ಳ ಟ್ರೇಲರ್‌ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅದಕ್ಕೆ ಎಲ್ಲೆಡೆ ರೆಸ್ಪಾನ್ಸ್ ಸಖತ್ ಆಗಿಯೇ ವ್ಯಕ್ತವಾಗುತ್ತಿದ್ದು, ಇವರೆಗೆ 3 ಕೋಟಿಗೂ ಅಧಿಕ ಮಂದಿ ಟ್ರೇಲರ್‌ ವೀಕ್ಷಿಸಿದ್ದಾರೆ. ಟ್ರೇಲರ್‌ ಟ್ರೆಂಡಿಂಗ್‌ನಲ್ಲಿ ‘ಝೀರೋ’ ಮೊದಲ ಸ್ಥಾನದಲ್ಲಿದ್ದು, ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಈ ಟ್ರೇಲರ್ ದುಪ್ಪಟ್ಟುಗೊಳಿಸಿತ್ತು.

ಈ ಸಿನಿಮಾದಲ್ಲಿ ‘ಬಾವ್ವಾ ಸಿಂಗ್’ (ಕುಳ್ಳ) ಪಾತ್ರದಲ್ಲಿ ಖಾನ್, ಸರಿಯಾಗಿ ಮಾತನಾಡಲು ಹಾಗೂ ನಡೆಯಲಾಗದ ವಿಜ್ಞಾನಿ ‘ಆಫಿಯಾ ಯುಸುಫ್‌ಜೈ ಬಿಂದೆರ್’ ಪಾತ್ರದಲ್ಲಿ ನಟಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ಸಹ ಬಾಲಿವುಡ್‌ ನಟಿ ‘ಬಬಿತಾ’ ಪಾತ್ರದಲ್ಲಿ ನಟಿಸಿದ್ದಾರೆ.

ಶಾರುಖ್ ಪತ್ನಿ ಗೌರಿ ಖಾನ್ ಒಡೆತನದ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿದೆ. ರೊಮ್ಯಾಂಟಿಕ್ ನಾಟಕ ಕಥೆಯನ್ನಾಧರಿಸಿದ ಚಿತ್ರ ಇದಾಗಿದ್ದು, ಹಿಮಾನ್ಶು ಶರ್ಮಾ ಕಥೆಯನ್ನು ಹೆಣೆದಿದ್ದಾರೆ. ಆನಂದ್ ಎಲ್ ರೈ ಅವರು ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್‌ 21ಕ್ಕೆ ಚಿತ್ರವು ವಿಶ್ವದಾದ್ಯಂತ ತೆರೆ ಕಾಣಲಿದೆ. ಸುಮಾರು ₹ 200 ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಶಾರುಖ್ ಖಾನ್ ಅಭಿನಯದ ಅತಿ ದೊಡ್ಡ ಬಜೆಟ್‌ನ ಚಿತ್ರ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT