ಗುರುವಾರ , ಜನವರಿ 21, 2021
16 °C

‘ಆರಾಟ್ಟ್‌’ ಶೂಟಿಂಗ್ ಆರಂಭಿಸಿದ ಮೋಹನ್‌ಲಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೆಯಾಳಂ ನಟ ಮೋಹನ್‌ಲಾಲ್‌ ತಮ್ಮ ಮುಂದಿನ ‘ಆರಾಟ್ಟ್‌’ ಸಿನಿಮಾದ ಶೂಟಿಂಗ್ ಅನ್ನು ಇಂದಿನಿಂದ ಆರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಚಿತ್ರದ ಸೆಟ್‌ನಲ್ಲಿನ ಕೊಲಾಜ್‌ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದೆ ಮೋಹನ್‌ಲಾಲ್‌ ನಟಿಸಿದ್ದ ‘ಮಿ. ಫ್ರಾಡ್‌’ ಹಾಗೂ ‘ವಿಲನ್’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಬಿ. ಉನ್ನಿಕೃಷ್ಣನ್ ಈ ಸಿನಿಮಾಕ್ಕೂ ನಿರ್ದೇಶನ ಮಾಡಲಿದ್ದಾರೆ. ‘ಪುಲಿಮುರುಗನ್‌’ ಸಿನಿಮಾಕ್ಕೆ ದೃಶ್ಯಕಥೆ ಬರೆದಿದ್ದ ಉದಯ್‌ಕೃಷ್ಣ ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ.

ಮೋಹನ್‌ ಇತ್ತೀಚೆಗೆ ‘ದೃಶ್ಯಂ 2’ ಚಿತ್ರದ ಚಿತ್ರೀಕರಣ ಮುಗಿಸಿದ್ದರು. 2013ರಲ್ಲಿ ತೆರೆ ಕಂಡ ‘ದೃಶ್ಯಂ’ ಸಿನಿಮಾದ ನಿರ್ದೇಶಕ ಜೀತು ಜೋಸೆಫ್‌ ಈ ಸಿನಿಮಾಕ್ಕೂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು