ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೈರ್‌ಫ್ಲೈ’ನಲ್ಲಿ ‘ರಾಜಣ್ಣ’ನಾದ ಮೂಗು ಸುರೇಶ್‌

Published 22 ಜೂನ್ 2024, 5:01 IST
Last Updated 22 ಜೂನ್ 2024, 5:01 IST
ಅಕ್ಷರ ಗಾತ್ರ

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ, ವಂಶಿ ನಿರ್ದೇಶನದ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಪ್ರಮುಖ ಪಾತ್ರವೊಂದನ್ನು ಚಿತ್ರತಂಡ ಪರಿಚಯಿಸಿದೆ. 

‘ರಾಜಣ್ಣ’ ಎಂಬ ಪಾತ್ರದಲ್ಲಿ ಸುರೇಶ್‌ ಅವರು ನಟಿಸಿದ್ದು, ಇದು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದು ಎಂದಿದೆ ಚಿತ್ರತಂಡ. ‘ಕೆಲವೊಮ್ಮೆ ನಾವು ಬರೆಯುವ ಪಾತ್ರಗಳೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ನಾವು ‘ರಾಜಣ್ಣ’ನನ್ನು ಮೂಗು ಸುರೇಶ್‌ ಅವರಲ್ಲಿ ಕಂಡೆವು. ಅವರ ನಟನೆಯ ಸಾಮರ್ಥ್ಯ ಅಗಾಧವಾದದ್ದು, ಚಿತ್ರರಂಗ ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ನಮ್ಮ ಚಿತ್ರದಲ್ಲಿ ಗಮನಸೆಳೆಯುವ ನಟನೆಯಲ್ಲಿ ಸುರೇಶ್‌ ಅವರ ನಟನೆಯೂ ಒಂದು’ ಎನ್ನುತ್ತಾರೆ ವಂಶಿ. 

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಸುರೇಶ್‌, ‘ಯುವಕರ ಜೊತೆ ಕೆಲಸ ಮಾಡಿದ ಅನುಭವ ಭಿನ್ನವಾದದ್ದು. ಇಷ್ಟು ದಿನ ದೊಡ್ಡ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಆದರೆ ‘ಫೈರ್‌ಫ್ಲೈ’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದೇನೆ. ನಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದಿಷ್ಟು ದೃಶ್ಯಗಳು ದೊರೆತಾಗ ನಮಗೆ ನಟಿಸಲು ಹುಮ್ಮಸ್ಸು ಬರುತ್ತದೆ. ‘ರಾಜಣ್ಣ’ ಪಾತ್ರಕ್ಕಿರುವ ಭಾವನೆಗಳು, ಮಾನವೀಯತೆ ಜನಕ್ಕೆ ಇಷ್ಟ ಆಗತ್ತದೆ. ನನ್ನ ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ನನಗೆ ಈ ತರಹದ ಪಾತ್ರ ದೊರಕಿದ್ದು ಖುಷಿ ಇದೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT