ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸ್ಟ್ ಎಕ್ಸೈಟೆಡ್‌ ಸಿನಿಮಾ ಪಟ್ಟಿ: ಕಬ್ಜಕ್ಕೆ ಮೂರನೇ ಸ್ಥಾನ

Last Updated 16 ಜೂನ್ 2020, 11:09 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ‘ಕೆಜಿಎಫ್’ ಪ್ಯಾನ್‌ ಇಂಡಿಯಾ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜ’.

ದೇಶದ ಜನಪ್ರಿಯ ಪತ್ರಿಕೆ ಹಾಗೂ ವೆಬ್‌ಸೈಟ್‌ಗಳು ನಡೆಸಿರುವ ‘ಟಾಪ್ 10 ಭಾರತದ ಮೋಸ್ಟ್ ಎಕ್ಸೈಟೆಡ್‌ ಸಿನಿಮಾಗಳು’ ಎಂಬ ಸಮೀಕ್ಷೆಯಲ್ಲಿ ‘ಕೆಜಿಎಫ್’‌ ಸಿನಿಮಾ ಎರಡನೇ ಸ್ಥಾನ ಪಡೆದಿದ್ದರೆ, ‘ಕಬ್ಜ’ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳು ಸ್ಥಾನಗಳನ್ನು ಪಡೆದಿವೆ.

ನಿರ್ದೇಶಕ ಆರ್‌. ಚಂದ್ರು ಹಾಗೂ ನಟ ಉಪೇಂದ್ರ ಜೋಡಿ ತಯಾರಿಸುತ್ತಿರುವ‘ಕಬ್ಜ’ ಸಿನಿಮಾವು ಕನ್ನಡ, ತೆಲುಗು, ಮಲಯಾಳಂ, ತಮಿಳು, ತೆಲುಗು, ಮರಾಠಿ, ಹಿಂದಿ, ಬಂಗಾಳಿ ಸೇರಿ ಏಳು ಭಾಷೆಗಳಲ್ಲಿ ತಯಾರಾಗಲಿದೆ. ‘ಐ ಲವ್‌ ಯು’ ಚಿತ್ರದ ನಂತರ ಈ ಜೋಡಿಯ ಎರಡನೇ ಚಿತ್ರವಾಗಿದ್ದು, ರೌಡಿಸಂ ಜೊತೆಗೆ ಪ್ರೇಮಕತೆಯ ಎಳೆ ಇರುವ ಚಿತ್ರವಿದು ಎನ್ನಲಾಗಿದೆ. ಇದರಲ್ಲಿ ಉಪೇಂದ್ರ ಎರಡು– ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ನಂತರ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಅದ್ಧೂರಿ ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಜ್ಜಾಗಿದೆ.

ಉಪೇಂದ್ರ ನಿರ್ದೇಶನದ ‘ಓಂ’ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ತುಂಬಿದ್ದು, ‘ಕಬ್ಜ‘ ಚಿತ್ರ ಮುಂದಿನ 25 ವರ್ಷಗಳ ಕಾಲ ನೆನಪಿರುವಂತೆ ಮಾಡುವ ಸಿನಿಮಾವಾಗಲಿದೆ ಎಂದು ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಟ್ರೇಲರ್‌ ಹಾಗೂ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು,ತೆಲುಗು ಹಾಗೂ ಹಿಂದಿ ಚಿತ್ರರಂಗದ ಬಹು ದೊಡ್ಡ ನಿರ್ಮಾಪಕರು ಸೇರಿದಂತೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT