ಭಾನುವಾರ, ನವೆಂಬರ್ 1, 2020
20 °C

ತಿರುವಳ್ಳೂರ್‌ನ ಫಾರ್ಮ್‌ ಹೌಸ್‌ನಲ್ಲಿ ಎಸ್‌ಪಿಬಿ ಅಂತಿಮ ವಿಧಿವಿಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣಂ ಅವರ  ಅಂತಿಮ ವಿಧಿವಿಧಾನ ತಮಿಳುನಾಡಿನ ತಿರುವಳ್ಳೂರ್‌ನ ತಾಮರೈಪಕ್ಕಂನಲ್ಲಿರುವ  ರೆಡ್‌ ಹಿಲ್ಸ್‌ ಫಾರ್ಮ್‌ಹೌಸ್‌ನಲ್ಲಿ ಜರುಗಿತು. 

ಇದಕ್ಕೂ ಮೊದಲು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳು, ಪ್ರಮುಖರು ಶುಕ್ರವಾರ  ಫಾರ್ಮ್ ಹೌಸ್ ಬಳಿ ಮುಗಿಬಿದ್ದಿದ್ದರು.

ಕೋವಿಡ್-19ರಿಂದ ಮೃತಪಟ್ಟಿದ್ದ ಹಿರಿಯ ಗಾಯಕನ ಅಂತಿಮ ದರ್ಶನಕ್ಕೆ ಇದ್ದ ನಿಬಂಧನೆಗಳ ನಡುವೆಯೂ ಹೆಸರಾಂತ ವ್ಯಕ್ತಿಗಳು, ಸಾಮಾನ್ಯರು, ಅಭಿಮಾನಿಗಳು ಫಾರ್ಮ್ ಹೌಸ್ ಬಳಿ ಗುಂಪುಗೂಡಿದ್ದರು. 

ಮುಂಜಾಗ್ರತೆಯಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು. ಸಾಲುಗಟ್ಟಿ ಬಂದ ಅಭಿಮಾನಿಗಳು ಎಸ್.ಪಿ.ಬಿ ಅವರ ಶರೀರದ ಅಂತಿಮ ದರ್ಶನ ಪಡೆದರು.

ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಿರುವಳ್ಳುರ ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಚಿತ್ರ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್‌, ಹಾಸ್ಯ ನಟ ಮಯಿಲ್ ಸಾಮಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು.

ಅಭಿಮಾನಿಗಳ ಗುಂಪು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿಯೋಜಿತ ಸ್ಥಳದಲ್ಲಿ ಮಾತ್ರವೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಚರಣ್ ನಡೆಸಿಕೊಡುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು