ಬುಧವಾರ, ನವೆಂಬರ್ 25, 2020
24 °C

ಎಎಲ್‌ಟಿ ಬಾಲಾಜಿ ಹಾಗೂ ಜೀ 5ನಲ್ಲಿ ‘ಮುಂಬೈ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಗದ್‌ ಬೇಡಿ, ಸಿಖಂದರ್‌ ಖೇರ್‌, ಸಂದೀಪ್ ಧರ್‌, ಪ್ರಿಯಾಂಕ್‌ ಶರ್ಮಾ ಹಾಗೂ ಮಧುರಿಮಾ ರಾಯ್ ಮೊದಲಾದವರು ನಟಿಸಿರುವ ‘ಮುಂಬೈ’ ವೆಬ್‌ಸರಣಿ ಇಂದು ಬಿಡುಗಡೆಯಾಗಲಿದೆ. ಆ್ಯಕ್ಷನ್‌–ಥ್ರಿಲ್ಲರ್ ಕಥೆ ಹೊಂದಿರುವ ಈ ವೆಬ್‌ಸರಣಿಯು ಎಎಲ್‌ಟಿ ಬಾಲಾಜಿ ಹಾಗೂ ಜೀ 5ನಲ್ಲಿ ತೆರೆ ಕಾಣಲಿದೆ.

1980 ಹಾಗೂ 1990ರ ದಶಕದ ಮುಂಬೈನ ಪಾತಕಲೋಕ ಹಾಗೂ ಪೊಲೀಸರ ನಡುವೆ ನಡೆದ ಘಟನೆಗಳ ಎಳೆಯನ್ನು ಇರಿಸಿಕೊಂಡು ಈ ಸರಣಿಯನ್ನು ನಿರ್ಮಾಣ ಮಾಡಲಾಗಿದೆ. ಭಾಸ್ಕರ್ ಶೆಟ್ಟಿ ಎಂಬ ಎನ್‌ಕೌಂಟರ್ ಸೆಷಲಿಸ್ಟ್ ಎನ್‌ಕೌಂಟರ್‌ ಮೂಲಕ ಮುಂಬೈ ಪಾತಕ ಲೋಕವನ್ನು ಹೇಗೆ ಮಟ್ಟ ಹಾಕುತ್ತಾನೆ, ಆತ ಮಾಡಿದ ಎನ್‌ಕೌಂಟರ್‌ಗಳೆಷ್ಟು? ಎನ್‌ಕೌಂಟರ್‌ ಮೂಲಕ ಮುಂಬೈ ಪಾತಕ ಲೋಕವನ್ನು ಹೇಗೆ ಬೆಚ್ಚಿ ಬೀಳಿಸುತ್ತಾನೆ ಎಂಬ ಅಂಶಗಳನ್ನು ಈ ವೆಬ್‌ಸರಣಿಯ ಟ್ರೈಲರ್‌ನಲ್ಲಿ ತೋರಿಸಲಾಗಿತ್ತು.

ಟ್ರೈಲರ್‌ ಮೂಲಕ  ಕುತೂಹಲ ಹುಟ್ಟುಹಾಕಿರುವ ಈ ವೆಬ್‌ಸರಣಿಗೆ ಅಪೂರ್ವ ಲಖಿಯಾ ಹಣ ಹೂಡಿಕೆ ಮಾಡಿದ್ದಾರೆ. ಅಂಗದ್ ಬೇಡಿ ಎನ್‌ಕೌಂಟರ್‌ ಸೆಷಲಿಸ್ಟ್ ಭಾಸ್ಕರ್ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು