ಬುಧವಾರ, ಏಪ್ರಿಲ್ 8, 2020
19 °C
23ಕ್ಕೆ ಹೃದಯಾಘಾತವಾಗಿ ಆಸ್ಪತ್ರೆಗ ದಾಖಲು

ಅರ್ಜುನ್‌ ಜನ್ಯಗೆ ಯಶಸ್ವಿ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರು ಇಲ್ಲಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.     

39 ವರ್ಷ ವಯಸ್ಸಿನ ಅವರು ಲಘು ಹೃದಯಾಘಾತಕ್ಕೆ ಒಳಗಾಗಿ ಫೆ.23ರಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.  

26 ರಂದು ಮಧ್ಯರಾತ್ರಿ 2 ಗಂಟೆಗೆ ವೈದ್ಯ ಆದಿತ್ಯ ಉಡುಪ ಹಾಗೂ ತಂಡ ಕೊರೊನರಿ ಆ್ಯಂಜಿಯೊಗ್ರಾಂ ಹಾಗೂ ಆ್ಯಂಜಿಯೊ ಪ್ಲಾಸ್ಟಿ ಚಿಕಿತ್ಸೆ ನೆರವೇರಿಸಿದೆ.  ಅವರಿಗೆ ಸ್ಟೆಂಟ್ ಅಳವಡಿಸಲಾಗಿದೆ.

ಜನ್ಯ ಅವರನ್ನು ಈಗ ಐಸಿಯುನಿಂದ ವಾರ್ಡ್‌ ಗೆ ಸ್ಥಳಾಂತರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಬರುವುದು 2 ತಾಸು ತಡವಾಗಿದ್ದರೂ ಕಷ್ಟವಾಗುತ್ತಿತ್ತು ಎಂದು ಅಪೋಲೊ ಆಸ್ಪತ್ರೆ ಹೆಲ್ತ್ ಕೇರ್ ಸರ್ವೀಸಸ್ ವ್ಯವಸ್ಥಾಪಕ ಸಿ.ಬಿ.ದಕ್ಷ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು