ಬುಧವಾರ, ನವೆಂಬರ್ 25, 2020
21 °C

ಯೂಟ್ಯೂಬ್‌ಗೆ ಬಂದ ‘ರಾಜು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಕ್ರೀನ್‌ ಷಾಟ್‌ ಫಿಲ್ಮ್ಸ್‌ ಬ್ಯಾನರ್‌ನ ಪಿಆರ್‌ಕೆ ಆಡಿಯೋ ಸಂಸ್ಥೆಯ ಮೈನೇಮ್‌ ಈಸ್‌ ರಾಜು ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 

ಈಗಾಗಲೇ 123,761 ಜನ ಅದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಂತ್‌ ಆಚಾರ್ಯ ಅವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಸುನಿಲ್‌ ರಾವ್‌ ಅವರ ನಿರೂಪಣೆ ಇದೆ. ಹರೀಶ್‌, ನವೀನ್‌ ಮತ್ತು ರೋಹಿತ್‌ ಅವರು ಚಿತ್ರ ನಿರ್ಮಣ ಮಾಡಿದ್ದಾರೆ. 

ಇಡೀ ಚಿತ್ರದಲ್ಲಿ ಒಂದು ಪೆನ್ನು ನಾಯಕ, ನಿರೂಪಕ ಎಲ್ಲವೂ. ಉಪನೋಂದಣಾಧಿಕಾರಿ ಕಚೇರಿಯ ಬರೆಯುವ ಮೇಜಿನ ಮೇಲೆ ನೂಲಿನಿಂದ ಕಟ್ಟಿ ಹಾಕಲ್ಪಟ್ಟು ನೇತಾಡುವ ಪೆನ್ನು ತನ್ನ ಕಥೆ ಹೇಳುತ್ತದೆ. ಮುಂದೊಂದು ದಿನ ಬರಹಗಾರ್ತಿಯ ಕೈಗೆ ಸಿಕ್ಕು ಸಾಧಕನಾಗುವ ಪೆನ್ನು ಇದು. ಪ್ರತಿಯೊಬ್ಬನ ಬದುಕಿನಲ್ಲೂ ಸಾಧನೆಯ ದಿನ ಬಂದೇ ಬರುತ್ತದೆ ಎಂದು ಹೇಳುತ್ತಾ ಸ್ಫೂರ್ತಿ ತುಂಬುತ್ತದೆ ಈ ಚಿತ್ರ. 

ಚಿತ್ರಕ್ಕೆ ವೀಕ್ಷಕರಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ. ನಟ ಪುನೀತ್‌ ರಾಜ್‌ ಕುಮಾರ್‌ ಅವರೂ ಕೂಡಾ ಈ ತಂಡದೊಂದಿಗಿದ್ದಾರೆ.

ವೀಕ್ಷಿಸಲು ಲಿಂಕ್‌: https://www.youtube.com/watch?v=A9CMjxrcMvE

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು