ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಬಂಧ ಹಳಸಿಲ್ಲ,‘ದೀಪಿಕಾ ನನ್ನ ರಾಣಿ’ಎಂದ ರಣವೀರ್‌ ಸಿಂಗ್‌

Last Updated 5 ಅಕ್ಟೋಬರ್ 2022, 6:39 IST
ಅಕ್ಷರ ಗಾತ್ರ

ತಮ್ಮಿಬ್ಬರ ನಡುವಿನ ಸಂಬಂಧದ ಕುರಿತಾದ ಎಲ್ಲ ವದಂತಿಗಳಿಗೆ ತೆರೆ ಎಳೆದಿರುವ ನಟ ರಣವೀರ್‌ ಸಿಂಗ್‌, ಪತ್ನಿ ದೀಪಿಕಾ ಪಡುಕೋಣೆ ನನ್ನ ರಾಣಿ ಎಂದಿದ್ದಾರೆ. ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ನಡುವಿನ ಸಂಬಂಧ ಸರಿಯಿಲ್ಲವೆಂದು ಇತ್ತೀಚೆಗೆಷ್ಟೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು.

ಖಾಸಗಿ ಆಭರಣ ಬ್ರ್ಯಾಂಡ್‌ಗೆ ರಾಯಭಾರಿಯಾಗಿರುವ ದೀಪಿಕಾ ಅವರನ್ನು ಅಭಿನಂದಿಸಿರುವ ರಣವೀರ್‌, ‘ನನ್ನ ರಾಣಿ! ನಾವು ಹೆಮ್ಮೆ ಪಡುವ ಕೆಲಸ ಮಾಡುತ್ತಿದ್ದಾಳೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಉಮರ್‌ ಸಂಧು ಎಂಬ ಸಿನಿಮಾ ವಿಮರ್ಶಕರೊಬ್ಬರು ದೀಪಿಕಾ–ರಣವೀರ್‌ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಟ್ವೀಟ್‌ ಮಾಡಿದ್ದರು. ಆದರೆ ಇದಕ್ಕೆ ಇಬ್ಬರೂ ಉತ್ತರಿಸಲು ಹೋಗಿರಲಿಲ್ಲ. ಬದಲಿಗೆ ಅವರ ಅಭಿಮಾನಿಗಳು ಸಂಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವೈರಲ್‌ ಆದ ಟ್ವೀಟ್‌ನ ಸುದ್ದಿ ಬರಿ ವದಂತಿ ಎಂಬಂತೆ ರಣವೀರ್‌ ಟ್ವೀಟ್‌ ಮಾಡಿದ್ದರು. ಇದೀಗ ದೀಪಿಕಾ ಬಗ್ಗೆ ಮತ್ತೆ ಪೋಸ್ಟ್‌ ಮಾಡುವ ಮೂಲಕ ರಣವೀರ್‌ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೊಂದೆಡೆ ದೀಪಿಕಾ ಕೂಡ ರಣವೀರ್‌ ಪೋಸ್ಟ್‌ಗಳಿಗೆ ಪ್ರೀತಿಯಿಂದ ಪ್ರತಿಕ್ರಿಯಿಸುವ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT