ಸೋಮವಾರ, ಮಾರ್ಚ್ 27, 2023
32 °C

ಸಮಂತಾ– ನಾಗಚೈತನ್ಯ‌ ತೆರೆಯಲ್ಲೂ ಗಂಡ–ಹೆಂಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಟಾಲಿವುಡ್‌ನ ಮುದ್ದಾದ ಜೋಡಿ ಎಂದು ಗುರುತಿಸಿಕೊಳ್ಳುತ್ತಿರುವ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ದಂಪತಿ ಮದುವೆಯಾದ ಬಳಿಕ ಮೊದಲ ಬಾರಿ ಸಿನಿಮಾದಲ್ಲಿ ನಾಯಕ– ನಾಯಕಿಯರಾಗಿ ನಟಿಸುತ್ತಿದ್ದಾರೆ. 

ನಿರ್ದೇಶಕ ಶಿವ ನಿರ್ವಾಣ ಅವರ ಚಿತ್ರದಲ್ಲಿ ಈ ಜೋಡಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ವೈವಾಹಿಕ ಜೀವನದ ಜೊತೆ ಜೊತೆಗೆ ವೃತ್ತಿರಂಗದಲ್ಲೂ ಬ್ಯುಸಿಯಾಗಿದ್ದರು. ಈಗ ಇವರಿಬ್ಬರು ‘ಮಜಿಲಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲೂ ಪತಿ– ಪತ್ನಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಸಾಹು ಗರಪತಿ ಹಾಗೂ ಹರೀಶ್‌ ಪೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ದಿವ್ಯಾಂಶ್‌ ಕೌಶಿಕ್‌ ಅವರು ಈ ಸಿನಿಮಾದ ಮುಖ್ಯಪಾತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಗೋಪಿ ಸುಂದರ್‌ ಅವರ ಸಂಗೀತ ಈ ಚಿತ್ರಕ್ಕಿದೆ.

ನಾಗ ಚೈತನ್ಯ ಅವರು ‘ಸವ್ಯಸಾಚಿ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ನವೆಂಬರ್‌ 2ರಂದು ಬಿಡುಗಡೆಯಾಗಲಿದೆ.  ನಾಗಚೈತನ್ಯ ಹಾಗೂ ಸಮಂತಾ ಅವರು ಮದುವೆಗಿಂತ ಮೊದಲು ‘ಯೇ ಮಾಯಾ ಚೇಸಾವೆ’, ‘ಅಟೋ ನಗರ್‌ ಸೂರ್ಯ’, ‘ಮನಂ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು