ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಕಲಚೇತನ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್:ತೆಲುಗು ನಟ ನಾಗಾರ್ಜುನ ಕ್ಷಮೆಯಾಚನೆ

Published 24 ಜೂನ್ 2024, 9:47 IST
Last Updated 24 ಜೂನ್ 2024, 9:47 IST
ಅಕ್ಷರ ಗಾತ್ರ

ನವದೆಹಲಿ: ವಿಕಲಚೇತನ ಅಭಿಯಾನಿಯೊಬ್ಬರನ್ನು ತಮ್ಮ ಬಾಡಿಗಾರ್ಡ್ ತಳ್ಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಕ್ಷಮೆ ಕೇಳಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ.

‘ಈ ಘಟನೆ ಈಗ ನನ್ನ ಗಮನಕ್ಕೆ ಬಂದಿದೆ. ಇದು ನಡೆಯಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸುತ್ತೇನೆ’ಎಂದು ಎಕ್ಸ್‌ನಲ್ಲಿ ವಿಡಿಯೊ ಜೊತೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ವಿಕಲಚೇತನ ಅಭಿಮಾನಿಯೊಬ್ಬರು ಕೆಫೆ ಸಿಬ್ಬಂದಿ ಜೊತೆಯಲ್ಲಿ ನಾಗಾರ್ಜುನ ಅವರ ಸಮೀಪಕ್ಕೆ ಬರಲು ಪ್ರಯತ್ನಿಸಿದಾಗ ಬಾಡಿಗಾರ್ಡ್ ಅವರನ್ನು ತಳ್ಳಿದ್ದಾರೆ. ಅಭಿಮಾನಿ ಮುಗ್ಗರಿಸಿ ಬೀಳುವ ಹೊತ್ತಿಗೆ ಅದೇ ಬಾಡಿಗಾರ್ಡ್‌ ಸಹಾಯ ಮಾಡಿದ್ದಾರೆ.

ಪಾಪರಾಜಿ ವಿರಲ್ ಭಯಾನಿ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ?’ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊದಲ್ಲಿ ಕುಬೇರ ಸಿನಿಮಾದ ಸಹ ನಟ ಧನುಶ್ ಜೊತೆ ನಾಗಾರ್ಜುನ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ಈ ಸಂದರ್ಭ ಅವರ ಬಳಿಗೆ ಬರಲು ಯತ್ನಿಸಿದ ಅಭಿಮಾನಿಯನ್ನು ಬಾಡಿಗಾರ್ಡ್ ನೂಕಿರುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT