ಮಂಗಳವಾರ, ಮಾರ್ಚ್ 9, 2021
31 °C

ಪ್ರೇಮಿಗಳ ದಿನಕ್ಕೆ ‘ಟ್ರಾನ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳ ಚಿತ್ರರಂಗದ ಖ್ಯಾತ ಜೋಡಿ ನಸ್ರಿಯಾ ನಜೀಂ ಮತ್ತು ಫಹದ್‌ ಫಾಸಿಲ್‌ ದಂಪತಿ ತೆರೆಯ ಮೇಲೂ ಒಟ್ಟಿಗೆ ನಟಿಸಿದ ‘ಟ್ರಾನ್ಸ್‌’ ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ತೆರೆ ಕಾಣಲಿದೆ. 

ಎರಡು ವರ್ಷಗಳ ವಿರಾಮದ ನಂತರ ನಸ್ರಿಯಾ ಸಿನಿಮಾಕ್ಕೆ ಮರಳಿದ್ದು, ‘ಟ್ರಾನ್ಸ್‌’ ಚಿತ್ರದಲ್ಲಿ ಪತಿ ಫಹದ್‌ ಫಾಸಿಲ್‌ ಜತೆ ತೆರೆ ಹಂಚಿಕೊಂಡಿದ್ದಾರೆ. ಈ ಜೋಡಿ ‘ಬೆಂಗಳೂರು ಡೇಸ್‌’ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು.  

‘ಟ್ರಾನ್ಸ್‌’ ಚಿತ್ರದ ಪೋಸ್ಟರ್‌ ಎಲ್ಲರ ಮನ ಸೆಳೆದಿದೆ. ಸೌಬಿನ್‌ ಶಹೀರ್‌, ಗೌತಮ್‌ ಮೆನನ್‌, ಚೆಂಬನ್‌ ವಿನೋದ್‌, ವಿನಾಯಕನ್‌, ಶ್ರೀನಾಥ್‌ ಭಾಸಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಆರು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿರುವ ಅನ್ವರ್‌ ರಶೀದ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಅಮಲ್‌ ನೀರಾದ್‌ ಅವರು ಸಿನಿಮಾಟೋಗ್ರಾಫರ್‌ ಆಗಿ ಬದಲಾಗಿದ್ದಾರೆ. ವಿನ್ಸೆಂಟ್‌ ಅವರ ಚಿತ್ರಕತೆ ಇದಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು