ಗುರುವಾರ , ನವೆಂಬರ್ 26, 2020
19 °C

‘ಶುಗರ್‌ಲೆಸ್’: ಸುಧಾಕರ್‌ ಜಾಗಕ್ಕೆ ನವೀನ್‌ ಡಿ ಪಡೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಶುಗರ್‌ಲೆಸ್’‌ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್‌ಲೈನ್‌ ಸುಧಾಕರ್‌ ಅವರ ನಿಧನದಿಂದ ಖಾಲಿಯಾದ ಜಾಗವನ್ನು ತುಂಬುತ್ತಿದ್ದಾರೆ ತುಳು ಚಿತ್ರ ನಟ ‘ಕುಸೆಲ್ದರಸೆ’ ನವೀನ್‌ ಡಿ. ಪಡೀಲ್‌.

ಸುಧಾಕರ್‌ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್‌ ಅವರೊಂದಿಗೆ ಚಿತ್ರಿಸಲಾಗಿದೆ. 

‘ಸುಧಾಕರ್‌ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡೆ. ಈ ಪಾತ್ರ ನನಗೆ ಉತ್ಸಾಹ ತುಂಬಿದೆ’ ಎಂದು ನವೀನ್‌ ಹೇಳಿದ್ದಾರೆ. 

‘ಇದರಲ್ಲಿ ಸುಧಾಕರ್‌ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ’ ಎಂದು ನವೀನ್‌ ಹೇಳಿದ್ದಾರೆ.

ನವೀನ್‌ ತುಳು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದ. ಈ ಹಾಸ್ಯ ಪಾತ್ರಗಳಿಂದಾಗಿಯೇ ಅವರನ್ನು ಕರಾವಳಿ ಭಾಗದಲ್ಲಿ ‘ಕುಸೆಲ್ದರಸೆ’ (ತಮಾಷೆಯ ಅರಸ) ಎಂದು ಅಭಿಮಾನಿಗಳು ಕರೆಯುತ್ತಾರೆ. ಹತ್ತಾರು ತುಳು ಚಿತ್ರಗಳಲ್ಲಿ ನಟಿಸಿದ, ಬಿರ್ಸೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅನುಭವಿ ಅವರು.

ಮಧುಮೇಹ ನಿಭಾಯಿಸುವ ಯುವಕನಾಗಿ ಚಿತ್ರದಲ್ಲಿ ಪ್ರಥ್ವಿ ಇದ್ದಾರೆ. ಪ್ರಿಯಾಂಕಾ ತಿಮ್ಮೇಶ್‌ ಅವರಿಗೆ ಜೋಡಿಯಾಗಲಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ಭೀಮಸೇನ ನಳಮಹಾರಾಜ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.