ಶನಿವಾರ, ಸೆಪ್ಟೆಂಬರ್ 18, 2021
23 °C

ಖುಷಿ ಕಪೂರ್ ಜತೆಗೆ ಡಿನ್ನರ್ ಪಾರ್ಟಿಗೆ ಹೊರಟ ನವ್ಯಾ ನವೇಲಿ ನಂದಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Navya Naveli Nanda Instagram Post

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಈ ಬಾರಿ ನವ್ಯಾ ಗೆಳತಿಯರಾದ ಖುಷಿ ಕಪೂರ್ ಮತ್ತು ಶಾನಾಯ ಕಪೂರ್ ಹಾಗೂ ಗೌರಿ ಜತೆಗೆ ಡಿನ್ನರ್ ಪಾರ್ಟಿಗೆ ತೆರಳಿದ್ದಾರೆ. ಅಲ್ಲದೆ, ಗೆಳತಿಯರೊಂದಿಗಿರುವ ಫೋಟೊಗಳನ್ನು ನವ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್‌ನ ಮುಂದಿನ ಪೀಳಿಗೆ ಎಂದೇ ನವ್ಯಾ ಮತ್ತು ಅವರ ಗೆಳತಿಯರನ್ನು ಗುರುತಿಸಲಾಗುತ್ತಿದೆ.

ಹೀಗಾಗಿ ನವ್ಯಾ ಮತ್ತು ಗೆಳತಿಯರ ಸುತ್ತಾಟವೂ ಸುದ್ದಿಯಾಗುತ್ತಿದೆ. ಜತೆಗೆ ಖುಷಿ ಕಪೂರ್ ಕೂಡ ಬಾಲಿವುಡ್‌ನತ್ತ ಒಲವು ಹೊಂದಿದ್ದು, ಹೊಸ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ.

ನವ್ಯಾ ಪೋಸ್ಟ್‌ಗೆ ಅವರ ಗೆಳತಿಯರು, ಶಾನಾಯ ತಾಯಿ ಮಹೀಪ್ ಕಪೂರ್ ಕೂಡ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು