ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ಬಾಬು ಚಿತ್ರದಲ್ಲಿ ನಯನತಾರಾ

Last Updated 17 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹೊಸ ಚಿತ್ರವೊಂದರಲ್ಲಿ ನಟಿ ನಯನತಾರಾ ಹಾಗೂ ಹಾಸ್ಯನಟ ಯೋಗಿ ಬಾಬು ಮತ್ತೆ ಒಂದಾಗಲಿದ್ದಾರೆ. ಈ ಹೊಸ ಚಿತ್ರವು ಹಾಸ್ಯ ಪ್ರಧಾನವಾಗಿದ್ದು, ನಯನತಾರಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ಯೋಗಿಬಾಬು ಅವರೇ ಚಿತ್ರಕತೆ ಬರೆದಿದ್ದಾರೆ. ಹಾಗೇ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಹಿಂದೆ ‘ಕೊಲಮಾವು ಕೋಕಿಲ’ ಚಿತ್ರದಲ್ಲಿ ಯೋಗಿ ಬಾಬು ಹಾಗೂ ನಯನತಾರಾ ನಟಿಸಿದ್ದರು. ಇದು ಪಕ್ಕಾ ಹಾಸ್ಯಮಯ ಚಿತ್ರವಾಗಿರಲಿದ್ದು, ಇದನ್ನು 18 ರೀಲ್ಸ್‌ ಪ್ರೊಡಕ್ಷನ್ ಅಡಿಯಲ್ಲಿ ಎಸ್‌.ಪಿ ಚೌಧರಿ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಕೊರೊನಾ ಲಾಕ್‌ಡೌನ್‌ ನಂತರ ಚಿತ್ರತಂಡ ಮಾಡಲಿದೆ. ಚಿತ್ರದಲ್ಲಿನ ಬೇರೆ ಬೇರೆ ಪಾತ್ರಗಳಲ್ಲಿ ಹೊಸಬರು ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT