ಭಾನುವಾರ, ಜೂನ್ 26, 2022
21 °C

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ನಯನತಾರಾ: ಒ2 ಟೀಸರ್ ಬಿಡುಗಡೆ

ಐಎಎ‌ನ್‌ಎಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಮಹಿಳಾ ಪ್ರಧಾನ ಚಿತ್ರಗಳಲ್ಲಿ ಇತ್ತೀಚೆಗೆ ಹೆಚ್ಚು ಮಿಂಚುತ್ತಿರುವ ನಟಿ ನಯನತಾರಾ ಅವರ ಮತ್ತೊಂದು ಥ್ರಿಲ್ಲರ್ ಚಿತ್ರ ‘ಒ2’ ಟೀಸರ್ ಬಿಡುಗಡೆಯಾಗಿದೆ.

ಜಿಎಸ್ ವಿಘ್ನೇಶ್  ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಹಾಟ್‌ಸ್ಟಾರ್‌ನಲ್ಲಿ ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಬಿಡುಗಡೆಯಾಗಲಿದೆ. ಟೀಸರ್ ನೋಡುಗರ ಗಮನ ಸೆಳೆದಿದ್ದು, ಥ್ರಿಲ್ಲರ್ ಕಥಾ ಹಂರವನ್ನು ಹೊಂದಿರುವುದು ತೋರುತ್ತದೆ. ಈ ಸಿನಿಮಾವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಧೋನಿ ನಿರ್ಮಾಣದ ಚೊಚ್ಚಲ ತಮಿಳು ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಧೋನಿ ಅವರು ಈಗಾಗಲೇ ಮೆಗಾಸ್ಟಾರ್ ರಜನಿಕಾಂತ್ ಆಪ್ತರಲ್ಲಿ ಒಬ್ಬರಾದ ಸಂಜಯ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ನಯನತಾರಾ ಅವರ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಧೋನಿ ಕಟ್ಟಾ ಅಭಿಮಾನಿಯಾಗಿದ್ದು, ಈ ಚಿತ್ರದಲ್ಲಿ ಧೋನಿ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. 'ಎಂ.ಎಸ್.ಧೋನಿ - ದಿ ಅನ್‌ಟೋಲ್ಡ್ ಸ್ಟೋರಿ' ತಮಿಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು