ಸೋಮವಾರ, ಸೆಪ್ಟೆಂಬರ್ 27, 2021
21 °C

ಬಾಲಿವುಡ್‌ಗೆ ನಯನತಾರಾ, ಶಾರೂಖ್‌ ಜೊತೆ ನಟಿಸಲಿರುವ ತಲೈವಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

DH Photo

ದಕ್ಷಿಣ ಭಾರತದ ಖ್ಯಾತ ನಟಿ ತಲೈವಿ ನಯನತಾರಾ ಇದೇ ಮೊದಲ ಬಾರಿಗೆ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ತಮಿಳು ನಿರ್ದೇಶಕ ಅಟ್ಲೀ ಕುಮಾರ್‌ ಅವರ ಚೊಚ್ಚಲ ಹಿಂದಿ ಚಿತ್ರದಲ್ಲಿ ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶಾರೂಖ್‌ ಖಾನ್‌ ದ್ವಿಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಅಟ್ಲೀ ಕುಮಾರ್‌ ನಿರ್ದೇಶನದಲ್ಲಿ ನಯನತಾರಾ ನಟಿಸಿದ್ದ ರಾಜ-ರಾಣಿ, ಬಿಗಿಲ್‌ ಚಿತ್ರಗಳು ಯಶಸ್ಸು ಕಂಡಿವೆ. ಹಾಗಾಗಿ ತಮ್ಮ ಮೊದಲ ಬಾಲಿವುಡ್‌ ಚಿತ್ರದಲ್ಲಿ ನಯನತಾರಾಗೆ ಮುಖ್ಯ ಪಾತ್ರ ನೀಡುವ ಸಾಧ್ಯತೆಗಳು ಹೆಚ್ಚಿವೆ. ಅರಮ್‌, ಕೊಲಮಾವು ಕೋಕಿಲ, ಡೋರಾ ಆ್ಯಂಡ್‌ ಮಾಯಾ ಹೀಗೆ ಬಿಡುವಿಲ್ಲದೆ ನಟಿಸುತ್ತಿರುವ ನಯನತಾರಾ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ.

ಇತ್ತೀಚೆಗೆ ನಯನತಾರಾ ಮಲಯಾಳಂ ಚಿತ್ರ ನಿಳಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರ ಅಷ್ಟೇನು ಸದ್ದು ಮಾಡಿರಲಿಲ್ಲ. ನಯನತಾರಾ ಮುಖ್ಯಭೂಮಿಕೆಯಲ್ಲಿರುವ ನೇಟ್ರಿಕಣ್‌ ಬಿಡುಗಡೆಯ ಸಮೀಪದಲ್ಲಿದೆ. ವಿಘ್ನೇಶ್‌ ಶಿವನ್‌ ನಿರ್ಮಾಣದ ಚಿತ್ರ ಇದಾಗಿದೆ. ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಅನ್ನಾತ್ತೆ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ನವೆಂಬರ್‌ ತಿಂಗಲ್ಲಿ ಬಿಡುಗಡೆಯಾಗಲಿರುವ ಚಿತ್ರದಲ್ಲಿ ಕೀರ್ತಿ ಸುರೇಶ್‌, ಖುಷ್ಬು, ಮೀನಾ, ಜಗಪತಿ ಬಾಬು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕಿಂಗ್‌ ಖಾನ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಸ್‌ ಚಿತ್ರದಲ್ಲಿ ಕಮರ್ಷಿಯಲ್‌ ಎಂಟರ್‌ಟೈನರ್‌ಗೆ ಪ್ರಾಶಸ್ತ್ಯ ನೀಡಲಾಗಿದೆ. ಇತ್ತ ಶಾರೂಖ್‌ ಖಾನ್‌ ಪಠಾನ್‌ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ ಮತ್ತು ಸಲ್ಮಾನ್‌ ಖಾನ್‌ ನಟಿಸಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು