ಸೋಮವಾರ, ಮಾರ್ಚ್ 27, 2023
22 °C

ನಟಿ ನಯನತಾರಾ, ವಿಘ್ನೇಶ್ ಶಿವನ್ 'ಶುಭ್ ಯಾತ್ರಾ' ನಿರ್ಮಾಣ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ‘ರೌಡಿ ಪಿಕ್ಚರ್ಸ್’ ಬ್ಯಾನರ್‌ನಡಿ ಮೊದಲ ಬಾರಿಗೆ  ಗುಜರಾತಿನ ‘ಶುಭ್ ಯಾತ್ರಾ’ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೇ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಪ್ರೊಡಕ್ಷನ್ ಬ್ಯಾನರ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.

'ನಮ್ಮ ಮೊದಲ ಗುಜರಾತಿ ಚಿತ್ರ ‘ಶುಭ್ ಯಾತ್ರಾ’ ಏಪ್ರಿಲ್ 28 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ.  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮನೀಷ್ಸೈನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೈನಿ ಚಿತ್ರ ಕಥೆಯನ್ನು ಬರೆದಿದ್ದಾರೆ. ಮಲ್ಹರ್ ಥಾಕರ್, ಮೊನಾಲ್ ಗಜ್ಜರ್, ದರ್ಶನ್ ಜರಿವಾಲ್ಲಾ, ಹಿಟು ಕನೋಡಿಯಾ, ಅರ್ಚನ್ ತ್ರಿವೇದಿ ಸೇರಿದಂತೆ ಜೇ ಭಟ್ ನಟಿಸಿದ್ದಾರೆ’ ಎಂದು ತಿಳಿಸಿದೆ.

ಇವನ್ನೂ ಓದಿ: 

                    

                    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು