ಚೆನ್ನೈ: ಮಲಯಾಳ ನಟಿ ನಜ್ರಿಯಾ ನಜೀಮ್ ಇತ್ತೀಚೆಗೆ ‘ಸೂಕ್ಷ್ಮದರ್ಶಿನಿ’ ಎನ್ನುವ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆದರೆ ಹಲವು ದಿನಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಇದಕ್ಕೆ ನಜ್ರಿಯಾ ಅವರು ಸುದೀರ್ಘ ಪತ್ರದ ಮೂಲಕ ಉತ್ತರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಜ್ರಿಯಾ ತಾವು ಭಾವನಾತ್ಮಕ ಸಂದಿಗ್ಧತೆ ಮತ್ತು ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ, ಹೀಗಾಗಿ ಕೆಲವು ದಿನ ಮೌನವಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ನಜ್ರಿಯಾ ಮಲಯಾಳ ನಟ ಫಹಾದ್ ಪಾಸಿಲ್ ಪತ್ನಿಯಾಗಿದ್ದಾರೆ. ‘ಫೋನ್ ಕರೆಗಳನ್ನು ಸ್ವೀಕರಿಸದೆ, ಸಂದೇಶಗಳಿಗೆ ಉತ್ತರಿಸದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ನನ್ನ ಜನ್ಮದಿನದ ಆಚರಣೆಯಲ್ಲೂ ಕಾಣಿಸಿಕೊಳ್ಳಲಿಲ್ಲ. ಸೂಕ್ಷ್ಮದರ್ಶಿನಿ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿಲ್ಲ. ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದೇನೆ, ಇದಕ್ಕೆ ಸಂತೋಷವಾಗುತ್ತಿದೆ. ಪ್ರಶಸ್ತಿ ಗೆದ್ದ ಇತರರಿಗೂ ಅಭಿನಂದನೆ. ಕಠಿಣ ಹಾದಿಯಲ್ಲಿ ಸಾಗುತ್ತಿದ್ದೇನೆ. ಚಿಕಿತ್ಸೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಗುಣಮುಖಳಾಗುತ್ತಿದ್ದೇನೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಿಮ್ಮ ಬೆಂಬಲಕ್ಕೆ ನಾನು ಸದಾ ಋಣಿ. ನಾನು ಈಗಿರುವ ಪರಿಸ್ಥಿತಿಯಿಂದ ಸಂಪೂರ್ಣವಾಗಿ ಹೊರಬರಲು ಇನ್ನಷ್ಟು ಸಮಯ ಬೇಕಾಗಬಹುದು. ಆದರೆ ಗುಣಮುಳಾಗುವ ಹಾದಿಯಲ್ಲಿದ್ದೇನೆ ಎಂದು ವಾಗ್ದಾನ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಬೇಸಿಲ್ ಜೋಸೆಫ್ ಮತ್ತು ನಜ್ರಿಯಾ ನಟಿಸಿರುವ ಸಸ್ಪೆನ್ಸ್ ಥ್ರಿಲರ್ ಸಿನಿಮಾ ‘ಸೂಕ್ಷ್ಮದರ್ಶಿನಿ’ 2024ರ ನ.15ರಂದು ತೆರೆಕಂಡಿತ್ತು. ಚಿತ್ರಮಂದಿರ ಮತ್ತು ಒಟಿಟಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕೆ ಸಿಕ್ಕಿದೆ.

ಈ ಚಿತ್ರಕ್ಕಾಗಿ 2025ನೇ ಸಾಲಿನ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ನಜ್ರಿಯಾ ಅವರಿಗೆ ದೊರಕಿದೆ.
.OTTಯಲ್ಲಿ ಸಿನಿಮಾ ಹಬ್ಬ: ಈ ವಾರ ಯಾವೆಲ್ಲ ಚಿತ್ರ ಬಿಡುಗಡೆ?.ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಜ್ರಿಯಾ ನಜೀಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.