ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ಅವರ ಜೀವನ ಕುರಿತಾದ ಪ್ರಮುಖ 5 ಚಿತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸುಭಾಷ್ ಚಂದ್ರ (1966):

ಪಿಯೂಷ್ ಬೋಸ್ ನಿರ್ದೇಶನದ ಈ ಚಿತ್ರವು ನೇತಾಜಿ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ. ಬಂಗಾಳಿ ಭಾಷೆಯಲ್ಲಿರುವ ಈ ಚಿತ್ರದಲ್ಲಿ ಬೋಸ್ ಅವರ ಬಾಲ್ಯ, ವಿದ್ಯಾಭ್ಯಾಸ, ಐಸಿಎಸ್ ಉತ್ತೀರ್ಣರಾಗಿದ್ದು ಮತ್ತು ಸ್ವಾತಂತ್ರ್ಯ ಹೋರಾಟದ ಅವರ ಆರಂಭಿಕ ದಿನಗಳ ಬಗೆಗಿನ ಚಿತ್ರಣವನ್ನು ಒಳಗೊಂಡಿದೆ.

ಚಿತ್ರ– ಸುಭಾಷ್ ಚಂದ್ರ (1966)

ನಿರ್ದೇಶಕ: ಪಿಯೂಷ್ ಬೋಸ್

ನಿರ್ಮಾಪಕ: ಅಜಿತ್ ಕುಮಾರ್ ಬ್ಯಾನರ್ಜಿ

ಭಾಷೆ: ಬಂಗಾಳಿ

ತಾರಾಗಣ: ಅಮರ್ ದತ್ತ, ಸಮರ್ ಚಟರ್ಜಿ, ಆಶಿಶ್ ಘೋಷ್

ಪ್ರಶಸ್ತಿ: 1967 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫರ್ಗಟನ್ ಹೀರೋ (2004)

ಶ್ಯಾಮ್ ಬೆನಗಲ್ ನಿರ್ದೇಶನದ ಈ ಚಿತ್ರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿಯವರ ಕೊನೆಯ ಐದು ವರ್ಷಗಳ ಜೀವನ, ಇಂಡಿಯನ್ ನ್ಯಾಷನಲ್ ಆರ್ಮಿ (INA) ರಚನೆ ಕುರಿತಾಗಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಚಿತ್ರವು ಪ್ರಶಸ್ತಿಗಳನ್ನು ಗೆದ್ದಿದೆ. ಸಚಿನ್ ಖೇಡೇಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ನಿರ್ದೇಶಕ: ಶ್ಯಾಮ್ ಬೆನಗಲ್.

ತಾರಾಗಣ: ಸಚಿನ್ ಖೇಡೇಕರ್ (ನೇತಾಜಿ ಸುಭಾಸ್ ಚಂದ್ರ ಬೋಸ್ ಪಾತ್ರದಲ್ಲಿ). , ಕುಲಭೂಷಣ್ ಖರ್ಬಂದ, ರಜಿತ್ ಕಪೂರ್, ಆರಿಫ್ ಜಕಾರಿಯಾ ಮತ್ತು ದಿವ್ಯಾ ದತ್ತಾ

ಸಂಗೀತ: ಎ.ಆರ್. ರೆಹಮಾನ್.

ಪ್ರಶಸ್ತಿಗಳು: ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ಮಾಣ, ವಿನ್ಯಾಸಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ಗುಮ್ನಾಮಿ (2019):

ಶ್ರೀಜಿತ್ ಮುಖರ್ಜಿ ನಿರ್ದೇಶನದ ಈ ಚಿತ್ರವು ನೇತಾಜಿ ಅವರ ಸಾವಿನ ರಹಸ್ಯ ( ಸುಭಾಷ್ ಚಂದ್ರ ಬೋಸ್ ಅವರು ಗುಮ್ನಾಮಿ ಬಾಬಾ (ಅನಾಮಧೇಯ ಸಾಧು) ಆಗಿ ಬದುಕಿದ್ದರು ಎಂಬ ಬಗ್ಗೆ) ಮತ್ತು ಮುಖರ್ಜಿ ಆಯೋಗದ ವರದಿ ಸುತ್ತ ಕಥೆ ಸುತ್ತುತ್ತದೆ.

ನಟ ಪ್ರೊಸೆನ್ಜಿತ್ ಚಟರ್ಜಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಗುಮ್ನಾಮಿ ಬಾಬಾ ಎರಡೂ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಬೋಸ್: ಡೆಡ್/ಅಲೈವ್ (2017):

ಇದು ವೆಬ್ ಸರಣಿ . ನಟ ರಾಜ್ಕುಮಾರ್ ರಾವ್ ಸುಭಾಷ್ ಚಂದ್ರ ಬೋಸ್ ಪಾತ್ರದಲ್ಲಿ ನಟಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ, 1945ರ ವಿಮಾನ ಅಪಘಾತ, ಸಾವಿನ ನಿಗೂಢತೆ ಮತ್ತು ಅವರ ಹೋರಾಟದ ಕುರಿತಾಗಿದೆ.

ಪಾತ್ರ: ರಾಜ್ಕುಮಾರ್ ರಾವ್ (ನೇತಾಜಿ ಸುಭಾಷ್ ಚಂದ್ರ ಬೋಸ್).

ನಿರ್ದೇಶನ/ನಿರ್ಮಾಣ: ಎಕ್ತಾ ಕಪೂರ್ (ALTBalaji)

ಪ್ಲಾಟ್ಫಾರ್ಮ್: ಈ ಸರಣಿಯು JioHotstar ಮತ್ತು MX Player ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಮಾಧಿ (1950):

ರಮೇಶ್ ಸೈಗಲ್ ನಿರ್ದೇಶನದ ಈ ಚಿತ್ರದಲ್ಲಿ ಸ್ವಾತಂತ್ರ್ಯಕ್ಕಾಗಿ ಇಂಡಿಯನ್ ನ್ಯಾಷನಲ್ ಆರ್ಮಿಗೆ ( ಐಎನ್ಎ) ಸೇರುವ ಯುವಕನ(ನೇತಾಜಿ) ಕಥೆಯ ಸುತ್ತ ಸುತ್ತುತ್ತದೆ.

ಚಿತ್ರ: ಸಮಾಧಿ (1950)

ನಿರ್ದೇಶಕ: ರಮೇಶ್ ಸೈಗಲ್.

ತಾರಾಗಣ: ಅಶೋಕ್ ಕುಮಾರ್, ನಳಿನಿ ಜಯವಂತ್, ಕುಲದೀಪ್ ಕೌರ್, ಶ್ಯಾಮ್.

ಸಂಗೀತ: ಸಿ. ರಾಮಚಂದ್ರ

ವಿಶೇಷತೆ: ಸ್ವಾತಂತ್ರ್ಯ ನಂತರ (1950ರಲ್ಲಿ) ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ.
.Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.