‘ಒಂದು ಕಥೆ ಹೇಳ್ಲಾ’, ‘ವಾವ್’ ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ನಿರ್ದೇಶನದ ಹೊಸ ಸಿನಿಮಾ ‘ಶಾಲಿವಾಹನ ಶಕೆ’ ತೆರೆಗೆ ಬರಲು ಸಜ್ಜಾಗುತ್ತಿದೆ. ಶೀರ್ಷಿಕೆ ಮೂಲಕವೇ ಗಮನಸೆಳೆದಿರುವ ಈ ಸಿನಿಮಾ ಟೈಮ್ ಲೂಪ್ ಜಾನರ್‌ನಲ್ಲಿದೆ.

ಇದು ಮೈಥಾಲಜಿ ಆಧಾರಿತ ಟೈಮ್ ಲೂಪ್ ಸಿನಿಮಾ. ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ, ‘ಸೈಡ್ ವಿಂಗ್’ ಹೆಸರಿನಲ್ಲಿ ತಮ್ಮದೇ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದು ಇವರ ನಿರ್ಮಾಣದ ಚೊಚ್ಚಲ ಸಿನಿಮಾ. ‘ಶಾಲಿವಾಹನ ಶಕೆ ಒಂದು ದಿನದಲ್ಲಿ ನಡೆಯುವ ಘಟನೆಯ ಸುತ್ತ ಸುತ್ತುವ ಸಿನಿಮಾ. ಈ ಟೈಮ್ ಥ್ರಿಲ್ಲರ್ ಸಿನಿಮಾವನ್ನು ಬಹುತೇಕ ಎಡಿಯೂರು ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಜೀವನದಲ್ಲಿ ನಡೆದ ಯಾವುದಾದರೂ ಒಂದು ಘಟನೆಯನ್ನು ಸರಿಮಾಡಿಕೊಳ್ಳುವ ಅವಕಾಶ ಸಿಕ್ಕಿದರೆ ಜೀವನ ಹೇಗಿರುತ್ತದೆ ಎನ್ನುವುದನ್ನು ಈ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ’ ಎಂದಿದ್ದಾರೆ ಗಿರೀಶ್.

‘ಇದುವರೆಗೂ ಬಂದಿರುವ ಬಹುತೇಕ ಟೈಮ್ ಥ್ರಿಲ್ಲರ್ ಸಿನಿಮಾಗಳು ತಂತ್ರಜ್ಞಾನವನ್ನು ಆಧರಿಸಿರುವ ಸಿನಿಮಾವಾಗಿರುತ್ತಿತ್ತು. ಆದರೆ ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸೀ ಪಾತ್ರಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ’ ಎಂದಿದೆ ಚಿತ್ರತಂಡ.

ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಗಿರೀಶ್, ಸುಪ್ರೀತಾ, ಮಂಜು, ಸುಂದರ್ ವೀಣಾ, ಲತಾ ಎಂ.ಬಿ. ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ಸುರೇಶ್ ಛಾಯಾಚಿತ್ರಗ್ರಹಣ, ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.