ಮಂಗಳವಾರ, ಮೇ 18, 2021
28 °C

ಬೆಳ್ಳಿ ತೆರೆ ಮೇಲೆ ‘ನಾಯಿ ಇದೆ ಎಚ್ಚರಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಾಯಿ ಇದೆ ಎಚ್ಚರಿಕೆ’ ಹೀಗೆಂದು ಮನೆಯ ಮುಂದಿರುವ ಫಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.

‘ವೈರಸ್‌ ಸಂಬಂಧಿತ ಕಥಾ ಹಂದರ ಇರುವ ಹಾಸ್ಯ ಪ್ರಧಾನ ಚಿತ್ರ ಇದು. ಇದರಲ್ಲಿ ಜರ್ಮನ್‌ ಷೆಫರ್ಡ್‌ ನಾಯಿಯದ್ದೇ ಪ್ರಮುಖ ಪಾತ್ರ. ಕಂದು, ಕಪ್ಪು ಮಿಶ್ರ ಬಣ್ಣದ ನಾಯಿ ರೂಬಿಯೇ ಚಿತ್ರದ ಕಥಾನಾಯಕ’ ಎನ್ನುತ್ತಾರೆ ನಿರ್ಮಾಪಕ ಪ್ರಬಿಕ್‌ ಮೊಗವೀರ್‌. ಅವರ ಪ್ರಕಾರ ಕನ್ನಡದಲ್ಲಿ ಇದು ಮೊದಲ ಪ್ರಯೋಗವಂತೆ.

‘ಶ್ವಾನ‌ಪ್ರಿಯರಾದ ಸ್ವಾಮಿ ಎಂಬುವವರ ಬಳಿ ನಾಯಿಯನ್ನು ತೆಗೆದುಕೊಳ್ಳಲಾಗಿದೆ. ಅದರ ನಟನೆಯನ್ನು ನೀವು ಪರದೆಯ ಮೇಲೆ ನೋಡಿದರೆ ಬೆರಗಾಗುತ್ತೀರಿ’ ಎನ್ನುತ್ತಾರೆ ಪ್ರಬಿಕ್. ರೂಬಿಯ ಚಿತ್ರವುಳ್ಳ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.

ಜಿ.ಎಸ್.ಕಲಿಗೌಡ ಅವರು ಈ ಚಿತ್ರದ ನಿರ್ದೇಶಕರು. ಕ್ರಿಸ್ಟೋಫರ್ ಅವರ ಸಂಗೀತ, ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣ, ಧನು ಕೃಷ್ಣ ಸಂಕಲನ ಈ ಚಿತ್ರಕ್ಕಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು