ಮಂಗಳವಾರ, ಜನವರಿ 31, 2023
19 °C

ಹೊಸ ಪ್ರತಿಭೆಗಳ ‘ದ್ವಂದ್ವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಂಬಿಎ ಮುಗಿಸಿ, ಎಂಎನ್‌ಸಿದಲ್ಲಿ ಉದ್ಯೋಗ ಮಾಡುತ್ತಿರುವ ಇಬ್ಬರು ಗೆಳೆಯರು ಸೇರಿಕೊಂಡು ‘ದ್ವಂದ್ವ’ ಚಿತ್ರ ನಿರ್ಮಿಸುತ್ತಿದ್ದಾರೆ.

ಕಥೆ, ಚಿತ್ರಕಥೆ, ನಿರ್ದೇಶನ ಎಲ್.ಭರತ್ ಅವರದ್ದು. ಕಾಮನ್‌ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಹನೂರು ತಾಲ್ಲೂಕಿನ ಪ್ರದೀಪ್‌ ಕೌದಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಇವರೊಂದಿಗೆ ಎಚ್.ಆರ್.ವಿಶ್ವನಾಥ್, ರಾಮುಕೊಣ್ಣಾರ್ ಹಾಗೂ ಮಣಿಕಡಕೊಳ ಅವರು ಚಿತ್ರದ ಸಹ ನಿರ್ಮಾಪಕರು.

ಚಿತ್ರವು ರಾಜಕೀಯ ಮತ್ತು ವಿಜ್ಞಾನ ವಿಷಯ ಆಧರಿಸಿದ ಕಥಾಹಂದರವನ್ನು ಹೊಂದಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ನಡೆಯುವ ಕಥೆಯಿದು. ಹೈಪರ್‌ಟೈಮಿಸಿಯಾ ಕಾಯಿಲೆ ಇರುವ ಹುಡುಗಿಯು ಒಂದು ಸಲ ಏನನ್ನಾದರೂ ನೋಡಿದರೆ 10-20 ವರ್ಷಗಳ ಕಾಲ ನೆನಪಿನಲ್ಲಿಡುವ ಇರುವ ಶಕ್ತಿ ಹೊಂದಿರುತ್ತಾಳೆ. ಇದನ್ನು ಅರಿತುಕೊಂಡ ಪ್ರಭಾವಿ ರಾಜಕಾರಣಿಗಳು ಆಕೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಅವಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಕಥೆ.

‘ಉಗ್ರಂ’ ಖ್ಯಾತಿಯ ತಿಲಕ್ ನಾಯಕ. ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಟಿಸಿದ್ದ ಆಸಿಯಾ ಫಿರ್ದೋಸಿ ಹಾಗೂ ನಯನಾ ನಾಯಕಿಯರು. ಶೋಭರಾಜ್, ದಿನೇಶ್‌ ಮಂಗಳೂರು, ಎಚ್.ಎಂ.ಟಿ.ವಿಜಯ್, ರಘುರಮಣಕೊಪ್ಪ, ಅನಿತಾಭಟ್, ಬಲರಾಜವಾಡಿ, ಮಿಮಿಕ್ರಿಗೋಪಿ, ವರುಣ್‌ಕೃಷ್ಣ ನಟಿಸುತ್ತಿದ್ದಾರೆ.

ಪ್ರತಾಪ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ-ಸಂಕಲನ ಋಷಿಕೇಶ್, ಸಾಹಸ ಜಾನಿ ಮಾಸ್ಟರ್ ಅವರದ್ದು. ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ, ಬೆಂಗಳೂರು, ತುಮಕೂರು, ಕನಕಪುರ ಕಡೆಗಳಲ್ಲಿ ಶೇಕಡ 95ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು