ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ‘ಆಪರೇಶನ್ 72’: ಇದು ಸತ್ಯಮೇಯ ಜಯತೇ

Last Updated 12 ಜನವರಿ 2022, 9:01 IST
ಅಕ್ಷರ ಗಾತ್ರ

ಸದ್ಯದ ವಿದ್ಯಮಾನಗಳು ಮತ್ತು ವಿಧ್ವಂಸಕ ಮನಸ್ಥಿತಿಗಳ ಬಗ್ಗೆ ಹೇಳಲು ಹೊರಟಿದೆ‘ಆಪರೇಶನ್ 72’.

ದೇಶದಲ್ಲಿ ವಿವಿಧ ಪರಿಸ್ಥಿತಿಗಳ ಒತ್ತಡಗಳು ಸೃಷ್ಟಿಯಾದಾಗ ನಮ್ಮ ಆಡಳಿತ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಹೇಳಲು ಹೊರಟಿದೆ ಈ ಆಪರೇಷನ್‌.

ಕಥೆಯ ಎಳೆ ಹೀಗಿದೆ. ದೇಶದ ಗಡಿಭಾಗದಲ್ಲಿ ನಿರಂತರ ಸೃಷ್ಟಿಯಾಗುವ ಒತ್ತಡ, ಭಯೋತ್ಪಾದನೆ, ಜೈವಿಕ ಅಸ್ತ್ರಗಳ ಬಳಕೆ, ಬಾಂಬ್‌ ಸ್ಫೋಟ, ನದಿ ನೀರಿಗೆ ವಿಷ ಬೆರೆಸುವುದು, ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುವುದು ಇಂಥ ವಿಷಯಗಳನ್ನು ಕಥೆ ಒಳಗೊಂಡಿದೆ.

ಈ ಸಂಗತಿಗಳಿಗೆ ದೇಶದ ಪ್ರಧಾನಿ ಸಂದರ್ಭಕ್ಕೆ ತಕ್ಕಂತೆ ಪ್ರತಿದಾಳಿ ನಡೆಸಿ, ಭಾರತೀಯ ಸೇನೆ, ಎನ್‌ಐಎ ಮತ್ತು ರಾ ಸಹಾಯದಿಂದ ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಸನ್ನಿವೇಶ ಇದೆ. ಇಲ್ಲಿ ಸಂಶೋಧಕಿಯೊಬ್ಬರು ಉನ್ನತ ಶಕ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಿದ್ದಪಡಿಸಿರುವುದು, ಅವರನ್ನು ಭಯೋತ್ಪಾದಕರು ಅಪಹರಿಸುವುದು, ಕೊನೆಗೂ ಆಕೆ ಪಾರಾಗಿ ಆ ಕ್ಷಿಪಣಿಯನ್ನು ದೇಶಕ್ಕೆ ಅರ್ಪಿಸುವ ಕತೆ ಇದೆ ಎಂದಿದೆ ಚಿತ್ರತಂಡ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಗೋಪಿನಾಥ್‌ ಶಿವಗಿರಿ ಅವರದ್ದು.

ತಾರಾರಗಣದಲ್ಲಿ ಮುರಳಿ ವಿ., ಮಂಜು, ಉತ್ತಮ್, ಸುಶಾಂತ್, ಚೈತನ್ಯ, ಅನಿಲ್, ರಂಜಿತಾ, ರಮ್ಯಾ, ನಿತ್ಯಾ, ತನುಶ್ರೀ ದತ್ತ, ಬೇಬಿ ಕಾರುಣ್ಯ ಇದ್ದಾರೆ. ಸಂಗೀತ ಆರೋನ್‌ ಕಾರ್ತಿಕ್‌ ವೆಂಕಟೇಶ್, ಛಾಯಾಗ್ರಹಣ ನರೇಹಳ್ಳಿ ರಾಮು, ಸಂಕಲನ ಪ್ರವೀಣ್-ನಾಗರಾಜ ಡಿ.ಹೊಳ್ಳ ಅವರದ್ದು. ಬೆಂಗಳೂರು, ತಲಕಾಡು, ರಾಮನಗರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರಚಾರ ಕಲೆ ಮತ್ತು ಕೆಲವು ತಾಂತ್ರಿಕ ಸಲಹೆಗಳನ್ನು ಡಾ.ಓಂ ಸತೀಶ್ ನಿರ್ವಹಿಸಿದ್ದಾರೆ. ಚಿತ್ರವನ್ನು ಆದಷ್ಟು ಬೇಗನೆ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT