ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ’ನ ಹೋರಾಟದ ಕಥೆ

Last Updated 27 ಮಾರ್ಚ್ 2023, 2:49 IST
ಅಕ್ಷರ ಗಾತ್ರ

ದೈವ ಹಾಗೂ ದುಷ್ಟಶಕ್ತಿಯ ಸಂಘರ್ಷದ ಕಥಾಹಂದರ ಒಳಗೊಂಡ ಅಧ್ಯಾತ್ಮ ಡ್ರಾಮಾ ಮತ್ತು ಥ್ರಿಲ್ಲರ್ ಪ್ರಕಾರದ ಸಿನಿಮಾ ‘ಆರ’. ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ಈ ಚಿತ್ರ ನಿರ್ಮಿಸಿದೆ. ಟೀಸರ್ ಮೂಲಕ ಈ ಚಿತ್ರ ಸದ್ದು ಮಾಡಿದೆ. ಅಶ್ವಿನ್‌ ವಿಜಯಮೂರ್ತಿ ಮತ್ತು ತಂಡದ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

ಅಶ್ವಿನ್ ವಿಜಯಮೂರ್ತಿ ನಿರ್ದೇಶನದ ಚಿತ್ರವಿದು. ಸಂಪೂರ್ಣ ಹೊಸ ಮುಖಗಳೇ ಈ ಚಿತ್ರದಲ್ಲಿವೆ.

ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ನಟ ರೋಹಿತ್ ಬರೆದಿದ್ದಾರೆ. ಆನಂದ್ ನೀನಾಸಂ ಸತ್ಯ, ರಾಜ್, ನಿಖಿಲ್, ಶ್ರೀಪಾದ್, ಪ್ರತೀಕ್, ಲೋಕೇಶ್ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

‘ಆರ’ ಎಂಬ ಹುಡುಗನ ಪ್ರಯಾಣದ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಬದುಕಿನ ರಕ್ಷಣೆಗಾಗಿ ಹೋರಾಡುವ ಹುಡುಗನ ಕಥೆ ಈ ಚಿತ್ರದಲ್ಲಿದೆ. ಕಥೆ ಅಲ್ಲಲ್ಲಿ ವಿಶಿಷ್ಟ ತಿರುವು ಪಡೆದಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದೆ. ಚಿತ್ರವು ಉಡುಪಿ ಭಾಗದ ಶೈಲಿಯ ಕನ್ನಡ ಹೊಂದಿದೆ.

‘ಎ.ಆರ್.’ ಫಿಲಂಸ್ ಬ್ಯಾನರ್ ಅಡಿ ಸುಜಾತ ಚಡಗ, ಚಂದ್ರಶೇಖರ್ ಸಿ. ಜಂಬಿಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ‘ಆರ’ ಚಿತ್ರಕ್ಕಿದೆ. ಜೂನ್‌ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT