ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಬರ ‘ತೂಫಾನ್’

Published 5 ಜುಲೈ 2024, 0:31 IST
Last Updated 5 ಜುಲೈ 2024, 0:31 IST
ಅಕ್ಷರ ಗಾತ್ರ
ಬಹುತೇಕ ಹೊಸಬರೆ ಸೇರಿ ನಿರ್ಮಿಸಿರುವ ‘ತೂಫಾನ್’ ಚಿತ್ರದ ಟೀಸರ್‌ ಪ್ರದರ್ಶನ ಇತ್ತೀಚೆಗಷ್ಟೇ ನಡೆಯಿತು. ಆರ್.ಚಂದ್ರಕಾಂತ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಎಸ್.ಆರ್.ಮೂವೀಸ್ ಲಾಂಛನದಲ್ಲಿ ಷರೀಫ ಬೇಗಂ ನಡಾಫ್ ಬಂಡವಾಳ ಹೂಡಿದ್ದಾರೆ. 

‘1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಕಥೆ ಇದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ಈ ಹಿಂದೆ ‘ಭೈರ್ಯ-07’ ಎಂಬ ಶೀರ್ಷಿಕೆ ಇಡಲಾಗಿತ್ತು. ಭೈರ್ಯ ಚಿತ್ರದಲ್ಲಿ ನಾಯಕನ ಹೆಸರಾಗಿದ್ದು, ಬೇರೆ ತಿರುವು ಇರಲಿ ಎಂದು ಶೀರ್ಷಿಕೆಯನ್ನು ‘ತೂಫಾನ್’ ಎಂದು ಬದಲಿಸಲಾಗಿದೆ’ ಎಂದರು ನಿರ್ದೇಶಕರು.

ಚಿತ್ರದ ನಾಯಕ ರೋಶನ್‌ಗೆ ಅನುಷಾ ರೈ ಜೋಡಿಯಾಗಿದ್ದಾರೆ. ಭೀಷ್ಮರಾಮಯ್ಯ, ರಂಗಾಯಣರಘು, ಅಶ್ವಿನ್‌ಹಾಸನ್, ಸೂರ್ಯಪ್ರವೀಣ್ ಮುಂತಾದವರು ಚಿತ್ರದಲ್ಲಿದ್ದಾರೆ. ಸಚಿನ್‌ ಬಸ್ರೂರು ಸಂಗೀತ, ಗಂಗು ಛಾಯಾಚಿತ್ರಗ್ರಹಣ, ಉಮೇಶ್.ಆರ್.ಬಿ ಸಂಕಲನ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT