ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊನೆಗೂ ಸಿಕ್ಕಿತು ವಿಶೇಷ ಶಾಲಾ ಮಕ್ಕಳಿಗೆ ರಜೆ

‘ಪ್ರಜಾವಾಣಿ ವರದಿ ಫಲಶ್ರುತಿ’
Published : 30 ಸೆಪ್ಟೆಂಬರ್ 2023, 23:32 IST
Last Updated : 30 ಸೆಪ್ಟೆಂಬರ್ 2023, 23:32 IST
ಫಾಲೋ ಮಾಡಿ
Comments

ಬೆಂಗಳೂರು: ಶಿಶುಕೇಂದ್ರಿತ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಸರಾ ಹಾಗೂ ಬೇಸಿಗೆ ರಜೆಗಳ ಸೌಲಭ್ಯ ಮಂಜೂರು ಮಾಡಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೇಳಾಪಟ್ಟಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ಅ.8ರಿಂದ 24ರವರೆಗೆ ದಸರಾ ರಜೆ, ಏ.11ರಿಂದ ಮೇ 28ರವರೆಗೆ ವಿಶೇಷ ಶಾಲೆಗಳಿಗೂ ಬೇಸಿಗೆ ರಜೆಯ ಸೌಲಭ್ಯ ದೊರೆಯಲಿದೆ.

ಶಾಲಾ ಶಿಕ್ಷಣ ಇಲಾಖೆಯ ಇತರೆ ಶಾಲೆಗಳಂತೆ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಶಿಶುಕೇಂದ್ರಿತ ಯೋಜನೆಯಡಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಮಾನಸಿಕ ಅಸ್ವಸ್ಥ, ದೃಷ್ಟಿದೋಷ, ಶ್ರವಣದೋಷವಿರುವ ಮಕ್ಕಳ ವಿಶೇಷ ಶಾಲೆಗಳಿಗೆ ನೀಡುತ್ತಿದ್ದ ರಜೆ ಸೌಲಭ್ಯವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರದ್ದು ಮಾಡಿತ್ತು. ಈ ಕುರಿತು ‘ಪ್ರಜಾವಾಣಿ’ ಸೆ.23ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ವಿಶೇಷ ಶಾಲೆಗಳಲ್ಲಿ ನಿರ್ಗತಿಕ ಮಕ್ಕಳಿದ್ದರೆ ಅವರ ಪಾಲನೆಗಾಗಿ ರಜಾ ಅವಧಿಯಲ್ಲಿ ಸೂಕ್ತ ಏರ್ಪಾಡುಗಳನ್ನು ಮಾಡಬೇಕು. ರಜೆಗೆ ಮಕ್ಕಳನ್ನು ಕಳುಹಿಸುವ ಮೊದಲು ಅವರ ಪೋಷಕರಿಗೆ ಪಾಲನೆ ಮತ್ತು ನಿರ್ವಹಣೆಯ ಬಗ್ಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡಬೇಕು ಎಂಬ ಸೂಚಿಸಲಾಗಿದೆ. 

ಸರ್ಕಾರದ ಮರು ಸುತ್ತೋಲೆಯಿಂದಾಗಿ ಸರ್ಕಾರಿ, ಅನುದಾನಿತ, ಶಿಶುಕೇಂದ್ರಿತ ಯೋಜನೆಯ 164 ಶಾಲೆಗಳ 5,500 ವಿಶೇಷ ಶಿಕ್ಷಕರು ಹಾಗೂ 3,600 ಬೋಧಕೇತರ ಸಿಬ್ಬಂದಿಗೆ ರಜಾಸೌಲಭ್ಯ ದೊರಕಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT