ಬುಧವಾರ, ಜೂನ್ 3, 2020
27 °C

ಹಸೆಮಣೆ ಏರಿದ ನಿಖಿಲ್ ಸಿದ್ಧಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್‌ ಸಿನಿ ಅಂಗಳದಲ್ಲಿ ಈಗ ಎಲ್ಲಿ ಕೇಳಿದರೂ ಮದುವೆಯದ್ದೇ ಸುದ್ದಿ. ಕಳೆದೆರಡು ದಿನಗಳ ಹಿಂದೆ ನಿರ್ದೇಶಕ ದಿಲ್‌ರಾಜು ಎರಡನೇ ಮದುವೆಯಾಗಿದ್ದಾರೆ. ಮೊದಲನೇ ಹೆಂಡತಿ ತೀರಿಕೊಂಡ ಅನೇಕ ವರ್ಷಗಳ ಬಳಿಕ ದಿಲ್‌ರಾಜು ಎರಡನೇ ಬಾರಿ ಹಸೆಮಣೆ ಏರಿದ್ದಾರೆ. ‘ಜಯಂ’ ಖ್ಯಾತಿಯ ನಿತಿನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು ಸದ್ಯದಲ್ಲೇ ತಮ್ಮ ಮದುವೆಯ ದಿನಾಂಕ ತಿಳಿಸಲಿದ್ದಾರೆ. ನಟ ರಾಣಾ ದಗ್ಗುಬಾಟಿ ಕೂಡ ತಮ್ಮ ಮನದರಸಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಮದುವೆಯ ಪ್ರಸ್ತಾಪ ಮಾಡಿದ್ದಾರೆ. 

ಈ ಎಲ್ಲದರ ನಡುವೆ ತೆಲುಗಿನ ‘ಹ್ಯಾಪಿಡೇಸ್’ ಚಿತ್ರದ ನಾಯಕ ನಟ ನಿಖಿಲ್ ಸಿದ್ಧಾರ್ಥ್‌ ನಿನ್ನೆ (ಮೇ.14) ರಂದು ಹಸೆಮಣೆ ಏರಿದ್ದಾರೆ. ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ತಮ್ಮ ಮನದೊಡತಿಗೆ ತಾಳಿ ಕಟ್ಟುವ ಮೂಲಕ ಮನೆ ತುಂಬಿಸಿಕೊಂಡಿದ್ದಾರೆ. ‌  

ಡಾ. ಪಲ್ಲವಿ ವರ್ಮಾ ಅವರನ್ನು ಕೆಲ ಸಮಯಗಳಿಂದ ಪ್ರೀತಿಸುತ್ತಿದ್ದ ನಿಖಿಲ್ ಕಳೆದ ಫೆಬ್ರುವರಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಏಪ್ರಿಲ್‌ನಲ್ಲಿ ಅವರ ಮದುವೆಯ ದಿನಾಂಕವೂ ಗೊತ್ತಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಆದರೆ ಹಿಂದೂ ಸಂಪ್ರದಾಯದ ‍ಪ್ರಕಾರ ಮುಂದಿನ ಕೆಲ ತಿಂಗಳು ಮದುವೆಗೆ ಒಳ್ಳೆಯ ದಿನ ಸಿಗದ ಕಾರಣ ನಿತಿನ್ ಲಾಕ್‌ಡೌನ್ ನಡುವೆಯೇ ಮದುವೆಯಾಗಿದ್ದಾರೆ. ನಿಖಿಲ್‌ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಮದುವೆಯಲ್ಲಿ ವಧು–ವರರ ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು. ಕುಟುಂಬ ಸದಸ್ಯರ ನಡುವೆ ಮದುವೆ ಸರಳವಾಗಿ ನೆರವೇರಿತ್ತು. 

ಕಳೆದ ಕೆಲ ದಿನಗಳ ಹಿಂದೆ ನಿಖಿಲ್ ಸಿದ್ಧಾರ್ಥ್‌ ತಮ್ಮ ಇನ್ಸ್‌ಸ್ಟಾ ಖಾತೆಯಲ್ಲಿ ತಾವು ಹಾಗೂ ತಮ್ಮ ಪ್ರೇಯಸಿ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದು ’ನಾವಿಬ್ಬರೂ ಆದಷ್ಟು ಬೇಗ ಒಂದಾಗುತ್ತೇವೆ. ಆದರೆ ಸದ್ಯಕ್ಕೆ ದೂರದಿಂದಲೇ ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಈ ಎಲ್ಲದರ ನಡುವೆ ನಟ ವರುಣ್ ತೇಜ್ ಕೂಡ ಮುಂದಿನ ವರ್ಷದಲ್ಲಿ ಮದುವೆಯಾಗುವ ಸುದ್ದಿ ಕೇಳಿಬರುತ್ತಿದ್ದು ಪ್ರಭಾಸ್ ಮದುವೆಯ ಕುರಿತು ಗಾಳಿಸುದ್ದಿ ಕೂಡ ಹರಿದಾಡುತ್ತಿದೆ.


ನಿಖಿಲ್ ಸಿದ್ಧಾರ್ಥ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು