ಶನಿವಾರ, ಸೆಪ್ಟೆಂಬರ್ 18, 2021
30 °C

ಮಾತು ಮುಗಿಸಿದ ‘ನೈಂಟಿ ಹೊಡಿ’: ವೈಜನಾಥ ಬಿರಾದಾರ್ ಅವರ ಐನೂರನೇ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರವು ಡಬ್ಬಿಂಗ್ ಮುಗಿಸಿಕೊಂಡಿದೆ. ನಟ ವೈಜನಾಥ ಬಿರಾದಾರ್ ಅವರ ಐನೂರನೇ ಚಿತ್ರ ಇದು. ಇತ್ತೀಚೆಗಷ್ಟೆ ಬೆಂಗಳೂರಿನ ಸುತ್ತಮುತ್ತ ಕೊನೆಯ ಹಂತದ ಚಿತ್ರೀಕರಣ ನಡೆಸಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯುವ ಕಾರ್ಯಕ್ರಮ ನಡೆಯಿತು. ಇದೀಗ ಮಾತಿನ ಮರುಜೋಡಣೆ (ಡಬ್ಬಿಂಗ್‌) ಮುಗಿಸಿದೆ.

ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡುತ್ತಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರವು,  ಕಮರ್ಷಿಯಲ್‌ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿಯವರು ಚಿತ್ರಕ್ಕೆ ಹಣ ಹೂಡಿದ್ದಾರೆ. ತಾರಾಗಣದಲ್ಲಿ ವೈಜನಾಥ ಬಿರಾದರ್ ಜೊತೆಯಾಗಿ ನೀತು, ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

ಕೃಷ್ಣ ನಾಯ್ಕರ್ ಛಾಯಾಗ್ರಹಣ, ರಾಕಿ ರಮೇಶ್ ಸಾಹಸ, ಯುಡಿವಿ ವೆಂಕಿ ಸಂಕಲನ ಮಾಡುತ್ತಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ ಎರಡು ಹಾಡಿಗೆ ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರು ಧ್ವನಿಯಾಗಿದ್ದಾರೆ. ಇನ್ನೊಂದು ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ ಚುಟು ಚುಟು ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ, ಸಂಗೀತ ನೀಡಿದ್ದಾರೆ. ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ. ಭೂಷಣ್ ಕೊರಿಯೋಗ್ರಫಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು