ನಟ ಪ್ರಥಮ್ ನಾಯಕನಾಗಿರುವ ‘ನೋ ಕೋಕೇನ್’ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಕೌರವ ವೆಂಕಟೇಶ್ ನಿರ್ದೇಶನದ ಚೊಚ್ಚಲ ಚಿತ್ರವಿದು.

‘ಕೋಕೇನ್ ದುಷ್ಪರಿಣಾಮಗಳ ಕುರಿತಾದ ಕಥೆಯಿದು. ಚಿತ್ರದಲ್ಲಿ ಕೇಂದ್ರ ರಕ್ಷಣಾ ಸಚಿವರಾದ ಸಿದ್ಲಿಂಗು ಶ್ರೀಧರ್, ಗೃಹ ಸಚಿವ, ಪೋಲೀಸ್ ಆಯುಕ್ತರೊಂದಿಗೆ ಕೋಕೇನ್ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿರುವಾಗ ನಾಯಕನ ಆಗಮನವಾಗುತ್ತದೆ. ಭದ್ರತೆಯನ್ನು ಉಲ್ಲಂಘಿಸಿ ಆತ ಬಂದಿರುವುದರಿಂದ ನಮ್ಮ ಮೇಲೆ ಆಕ್ರಮಣ ಮಾಡಲು ಬಂದಿದ್ದಾನೆಂದು ಅನುಮಾನಿಸಿ ನಾಯಕನ ಮೇಲೆ ಫೈರಿಂಗ್ ಆಗುತ್ತದೆ. ಆತ ಏತಕ್ಕೆ ಬಂದ? ಹೇಳುವುದಾದರೂ ಏನಿತ್ತು? ಇದಕ್ಕೆಲ್ಲಾ ಉತ್ತರ ಚಿತ್ರ ನೋಡಿದರೆ ತಿಳಿಯುತ್ತದೆ. ಬಹುಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ಅನ್ನು ಮಂಗಳೂರಿನಲ್ಲಿ ಚಿತ್ರೀಕರಿಸುತ್ತೇವೆ. ಒಂದು ಹಾಡಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಇದೆ’ ಎಂದರು ನಿರ್ದೇಶಕರು.

ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ. ಆರನ ಮೂಳೇರ್ ನಾಯಕಿ. ಶೋಭರಾಜ್, ಸಿದ್ಲಿಂಗು ಶ್ರೀಧರ್, ಜಗದೀಶ್ ಕೊಪ್ಪ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯಭಗವಾನ್ ದಾಸ್, ರಚಿತಾ, ಮಿಮಿಕ್ರಿ ಗೋಪಿ, ರವಿ ಕಾಳೆ ಮುಂತಾದವರು ಅಭಿನಯಿಸಿದ್ದಾರೆ. ಯೋಗರಾಜ್ ಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಾಮ್ರಾಟ್ ಛಾಯಾಚಿತ್ರಗ್ರಹಣ, ರಘು ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.