ನೋರಾ ಫತೇಹಿ 'ಡ್ಯಾನ್ಸ್ ಮೇರಿ..' ಹಾಡಿಗೆ ರಷ್ಯಾ ಪುಟಾಣಿಯ ಹೆಜ್ಜೆ; ವಿಡಿಯೊ ವೈರಲ್

ಬಾಲಿವುಡ್ನಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನೋರಾ ಫತೇಹಿ ಅವರ ನೃತ್ಯದ ವಿಡಿಯೊಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸುತ್ತಿವೆ. ಇತ್ತೀಚಿನ 'ಡ್ಯಾನ್ಸ್ ಮೇರಿ ರಾಣಿ' ಮ್ಯೂಸಿಕ್ ವಿಡಿಯೊ ಟ್ರೆಂಡ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
ರಷ್ಯಾದ ಪುಟ್ಟ ಹುಡುಗಿಯೊಬ್ಬಳು ಅದೇ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೊ ಈಗ ವೈರಲ್ ಆಗಿದೆ ಹಾಗೂ ನೋರಾ ಫತೇಹಿ ಅವರ ಗಮನ ಸೆಳೆದಿದ್ದು, ಇನ್ಸ್ಟಾಗ್ರಾಮ್ನಲ್ಲಿ ಆ ವಿಡಿಯೊ ಹಂಚಿಕೊಂಡಿದ್ದಾರೆ.
ಯುವ ಮನಸ್ಸುಗಳನ್ನು ಬಹುಬೇಗ ಸೆಳೆದಿರುವ ಈ ಹಾಡಿಗೆ ಆರು ವರ್ಷದ ಹುಡುಗಿ ಎಸೆನ್ಯಾ ಸಹ ಅತ್ಯುತ್ಸಾಹದಲ್ಲಿ ಕುಣಿದಿದ್ದಾಳೆ.
ಆ ಮುದ್ದಾದ ಹುಡುಗಿಯ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೋರಾ, 'ಕ್ಯೂಟಿ ಪೈ...' ಎಂದು ಕರೆದಿದ್ದಾರೆ. ನೋರಾ ಅವರ ಈ ಪೋಸ್ಟ್ ಈಗಾಗಲೇ 3.84 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.