ಮಂಗಳವಾರ, ಮಾರ್ಚ್ 2, 2021
19 °C

ಒರಿಯಾ ನಟ ರಬಿ ಮಿಶ್ರಾ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಬಿ ಮಿಶ್ರಾ

ಒರಿಯಾ ಭಾಷೆಯ ಖ್ಯಾತ ಸಿನಿಮಾ ಹಾಗೂ ಕಿರುತೆರೆ ನಟ ರಬಿ ಮಿಶ್ರಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಆಸ್ಪತ್ರೆಯಲ್ಲೇ ಹೃದಯಾಘಾತವಾಗಿತ್ತು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಗೋಪಾಲ ರಹಸ್ಯ ಸಿನಿಮಾದಿಂದ ಅವರು ಖ್ಯಾತಿ ಪಡೆದಿದ್ದರು.

ಮಂಗಳವಾರ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಬುಧವಾರ ಬೆಳಗ್ಗಿನ ಜಾವ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆಕಸ್ಮಿಕವೆಂಬಂತೆ ಮಂಗಳವಾರ ಧಾರಾವಾಹಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅವರು ಹೃದಯ ಸಮಸ್ಯೆ ಇರುವ ವ್ಯಕ್ತಿಯೊಬ್ಬನ ಪಾತ್ರದಲ್ಲಿ ನಟಿಸಿದ್ದರು.

ಇವರು ಸಿನಿಮಾ, ಧಾರಾವಾಹಿ ಹಾಗೂ ನಾಟಕಗಳ ಮೂಲಕ ಹೆಸರು ಗಳಿಸಿದ್ದರು.

ಒರಿಯಾ ಸಿನಿರಂಗದ ಗಣ್ಯರು ಹಾಗೂ ರಾಜಕೀಯರಂಗದ ಗಣ್ಯರು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು