ಗುರುವಾರ , ಜನವರಿ 28, 2021
15 °C

‘ರಾಧಾಕಲ್ಯಾಣ’ ಖ್ಯಾತಿಯ ಕೃತ್ತಿಕಾ ರವೀಂದ್ರ ನಟನೆಯ ‘ಒಲವೇ’ ಆಲ್ಬಂ ಸಾಂಗ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಕೃಶಿ ಕ್ರಿಯೆಷನ್ಸ್ ಸಂಸ್ಥೆ ಅಡಿ ಸಮಾನ ಮನಸ್ಕರೆಲ್ಲಾ ಸೇರಿ ‘ಒಲವೇ’ ಎಂಬ ವಿನೂತನ ಆಲ್ಬಂ ಸಾಂಗ್ ಒಂದನ್ನು ಹೊರ ತಂದಿದ್ದಾರೆ. ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ಶೈಲಿಯಲ್ಲಿರುವುದು ವಿಶೇಷ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಹೆಸರು ಗಳಿಸಿರುವ ನಟಿ ಕೃತ್ತಿಕಾ ರವೀಂದ್ರ ನಾಯಕಿಯಾಗಿ ಅಭಿನಯಿಸಿರುವ ಈ ಗೀತೆಯಲ್ಲಿ ವರುಣ್ ಹೆಗಡೆ ಅವರು ನಾಯಕನಾಗಿ ನಟಿಸಿದ್ದಾರೆ. ಯುವ ನಿರ್ದೇಶಕಿ, ನಟಿ ಎಂ.ಎಸ್‌. ಶಿವಾನಿ ಅವರ ಪರಿಕಲ್ಪನೆಗೆ ಗಾಯನ, ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಡಾ. ಸುಚೇತನ್ ರಂಗಸ್ವಾಮಿ.

ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ. ಕೆಜಿಎಫ್‌ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೊವನ್ನು ಎಡಿಟ್ ಮಾಡಿದ್ದಾರೆ. ಆನಂದ್ ಆಡಿಯೊಸ್ ಈ ಗೀತೆಯನ್ನು ಸಮರ್ಪಿಸುತ್ತಿದ್ದು, ಇಂದು ಆನಂದ್ ಆಡಿಯೊಸ್‌ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಹಾಡು ವೀಕ್ಷಿಸಲು ಲಭ್ಯವಿದೆ.

ಹಲವಾರು ಯೋಜನೆಗಳನ್ನು ನಿರ್ಮಿಸಲು ಮುಂದಾಗಿರುವ ಸುಕೃಶಿ ಸಂಸ್ಥೆಯು ಜನರ ಮನ್ನಣೆ ಹಾಗೂ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು