ಬುಧವಾರ, ಡಿಸೆಂಬರ್ 8, 2021
18 °C

‘ಓಲ್ಡ್ ಮಾಂಕ್‍’ ಚಿತ್ರದ ಟ್ರೇಲರ್ ಬಿಡುಗಡೆ: ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಓಲ್ಡ್​ ಮಾಂಕ್​’ ಚಿತ್ರದ ಟ್ರೇಲರ್‌ ಗುರುವಾರ (ಆ.26) ಬಿಡುಗಡೆ ಆಗಿದೆ. ಶ್ರೀನಿ ಅವರು ಈ ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ.

ಶೀರ್ಷಿಕೆಯಿಂದಲ್ಲೇ ಎಲ್ಲರ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಸಿಹಿ ಕಹಿ ಚಂದ್ರು, ಎಸ್ ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ಸೇರಿದಂತೆ ದೊಡ್ಡ ತಾರಾಗಣವಿದೆ.

ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಭರತ್​ ಪರಶುರಾಮ್​ ಛಾಯಾಗ್ರಹಣ, ಸೌರಭ್​-ವೈಭವ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನ ಮಾಡಿದ್ದಾರೆ. ಪ್ರದೀಪ್ ಶರ್ಮಾ, ಸೃಜನ್​ ಯರಬೋಲು, ಸೌರಭ್​-ವೈಭವ್, ಶ್ರೀನಿ ಜತೆಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ‘ಟೋಪಿವಾಲಾ’, ‘ಬೀರ್​ಬಲ್’​, ‘ಶ್ರೀನಿವಾಸ ಕಲ್ಯಾಣ’, ‘ರೂಲ್ಸ್‌’ ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ನಿರ್ದೇಶಕ ಶ್ರೀನಿ, ಇದೀಗ ‘ಓಲ್ಡ್​ ಮಾಂಕ್​’ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಇದನ್ನೂ ಓದಿ... ‘ತೋತಾಪುರಿ’ ಪ್ರೋಮೊ: ಲೇಟಾಗಿ ಬಂದ್ರು ಲೇಟೆಸ್ಟಾಗಿ ಬರ್ತಿವಿ ಎಂದ ಜಗ್ಗೇಶ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು