ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಸುದ್ದಿ: ಪ್ರೇಮಕಥೆ ಗುನುಗಿದ ವಿನಯ್ ರಾಜ್‌ಕುಮಾರ್‌

Published 22 ಜನವರಿ 2024, 21:48 IST
Last Updated 22 ಜನವರಿ 2024, 21:48 IST
ಅಕ್ಷರ ಗಾತ್ರ

‘ಸಿಂಪಲ್‌’ ಸುನಿ ನಿರ್ದೇಶಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾ ಫೆ.8ರಂದು ರಿಲೀಸ್‌ ಆಗುತ್ತಿದ್ದು, ಚಿತ್ರದ ಮೊದಲ ಹಾಡು ‘ಗುನು ಗುನುಗು’ ಬಿಡುಗಡೆಯಾಗಿದೆ.  

ವಿನಯ್ ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ಇರುವ ಈ ಚಿತ್ರದ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ‘ಇವರು ‘ಸಿಂಪಲ್‌’ ಸುನಿ ಅಲ್ಲ. ಕಾಂಪ್ಲಿಕೇಟೆಡ್‌(ಕ್ಲಿಷ್ಟಕರ) ಸುನಿ’ ಎಂದು ಕಾಲೆಳೆದ ಗಣೇಶ್‌, ‘ಕಥೆ ಮಾಡುವ ವಿಚಾರದಲ್ಲಿ ಇವರ ಬರವಣಿಗೆಯೇ ಭಿನ್ನ. ಸುನಿ ಜೊತೆ ನನ್ನ ಪಯಣ ಬಹಳ ವರ್ಷದ್ದು. ‘ಚಮಕ್’ ಸಿನಿಮಾ ಆದಮೇಲೆ ಹಲವು ಬಾರಿ ಜೊತೆಯಾಗಿ ಕುಳಿತು ಕಥೆಗಳನ್ನು ಚರ್ಚಿಸಿದ್ದೇವೆ. ಒಂದೊಂದು ಬಾರಿಯೂ ಒಂದೊಂದು ಐಡಿಯಾ ತರುತ್ತಾರೆ. ಅದೇ ರೀತಿ ‘ಒಂದು ಸರಳ’ ಪ್ರೇಮಕಥೆ’ಯೂ ವಿಭಿನ್ನವಾಗಿ ಇರುತ್ತದೆ ಅಂದುಕೊಂಡಿದ್ದೇನೆ. ಸುನಿಯ ಡೈಲಾಗ್ಸ್‌, ಬರವಣಿಗೆ ಶೈಲಿಗೆ ನಾನು ದೊಡ್ಡ ಅಭಿಮಾನಿ. ನಮ್ಮ ಭಾಷೆ, ವ್ಯಾಕರಣದ ಮೇಲೆ ಹಿಡಿತ ಇರುವ ನಿರ್ದೇಶಕರಲ್ಲಿ ಒಬ್ಬರು ಸುನಿ’ ಎಂದರು ಗಣೇಶ್‌. 

ಚಿತ್ರದಲ್ಲಿ ವಿನಯ್‌ಗೆ ಸ್ವತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್‌ ಜೋಡಿಯಾಗಿದ್ದಾರೆ. ‘ಗುನು ಗುನುಗು’ ಹಾಡಿಗೆ ಸಚಿನ್ ಸಂಘೈ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಹಾಡಿಗೆ ಕೇಶವ್ ಆನಂದ್ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ರಾಮ್ ಮೂವೀಸ್ ಬ್ಯಾನರ್‌ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT