2022ರಅಕಾಡೆಮಿ ಅವಾರ್ಡ್ಸ್‌ಗೆ ಭಾರತದಿಂದ ಪ್ರವೇಶ ಪಡೆದಿದ್ದ ತಮಿಳಿನ 'ಕೂಳಾಂಗಲ್' ಚಿತ್ರವು ಆಸ್ಕರ್ ಸ್ಪರ್ಧೆಯಿಂದ ಹೊರಬಿದ್ದಿದೆ.
ಕೂಳಾಂಗಲ್ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಚೆಲ್ಲಪಾಂಡಿ ಮತ್ತು ಕರುಥಾಡೈಯಾನ್ ಅಭಿನಯಿಸಿದ್ದಾರೆ. ನಯನತಾರಾ ಮತ್ತು ವಿಗ್ನೇಶ್ ಶಿವನ್‌ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.
ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಪ್ರವೇಶ ಪಡೆದಿದ್ದ ‘ರೈಟಿಂಗ್ ವಿತ್ ಫೈರ್‘ ಚಿತ್ರವು ಆಸ್ಕರ್ ಸ್ಪರ್ಧೆಯ ಮುಂದಿನ ಸುತ್ತನ್ನು ಪ್ರವೇಶಿಸಿದೆ ಎಂದುಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ ಮತ್ತು ಸೈನ್ಸ್ (ಎಎಂಪಿಎಎಸ್) ಮಂಗಳವಾರ ಪ್ರಕಟಿಸಿದೆ.
ಮೀರಾ ದೇವಿ ಹಾಗೂ ಸುನೀತಾ ಪ್ರಜಾಪತಿ ಅವರು‘ರೈಟಿಂಗ್ ವಿತ್ ಫೈರ್‘ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.