ಬುಧವಾರ, ಫೆಬ್ರವರಿ 8, 2023
18 °C
‘ಆಲ್‌ ದಟ್‌ ಬ್ರೀತ್‌’, ‘ಎಲಿಫೆಂಟ್ ವಿಸ್ಪರ್ಸ್‌’ ಸಾಕ್ಷ್ಯಚಿತ್ರಗಳ ಸ್ಪರ್ಧೆ

ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ‘ನಾಟು..ನಾಟು..’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಸ್ ಏಂಜಲೀಸ್: ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್‌ಆರ್‌ಆರ್’ ಚಿತ್ರ ಆಸ್ಕರ್‌ ಪ್ರಶಸ್ತಿಗೆ ನಾಮಕರಣಗೊಂಡಿದೆ. ಅತ್ಯುತ್ತಮ ಮೂಲ ಗೀತೆ (ಒರಿಜಿನಲ್‌) ವರ್ಗದಲ್ಲಿ ಈ ಚಿತ್ರದ ‘ನಾಟು.. ನಾಟು...’ ಗೀತೆಯು ಸ್ಪರ್ಧೆಯಲ್ಲಿದೆ.

‘ಆಸ್ಕರ್’ ಹೆಸರಲ್ಲಿ ನೀಡುವ 95ನೇ ಅಕಾಡೆಮಿ ಅವಾರ್ಡ್ಸ್‌ಗೆ ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರಗಳನ್ನು ಮಂಗಳವಾರ ಪ್ರಕಟಿಸಲಾಗಿದೆ. ‘ನಾವು ಇತಿಹಾಸ ಸೃಷ್ಟಿಸಿದೆವು..’ ಎಂದು ಆರ್‌ಆರ್‌ಆರ್ ಚಿತ್ರತಂಡ ತನ್ನ ವೆಬ್‌ಸೈಟ್‌ನಲ್ಲಿ ಸಂತಸ ಹಂಚಿಕೊಂಡಿದೆ.

ಭಾರತದ ಸಾಕ್ಷ್ಯಚಿತ್ರಗಳಾದ ’ಆಲ್‌ ದಟ್‌ ಬ್ರೀತ್‌‘, ‘ಎಲಿಫೆಂಟ್ ವಿಸ್ಪರ್ಸ್‌’ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ
ಯಲ್ಲಿವೆ. ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದ್ದ ‘ದ ಲಾಸ್ಟ್ ಶೋ’ ಅಂತಿಮ ಐದರ ಸುತ್ತಿನಲ್ಲಿ ಸ್ಥಾನ ಪಡೆದಿಲ್ಲ.

ಹಾಲಿವುಡ್‌ ನಟರಾದ ರಿಜ್‌ ಅಹ್ಮದ್ ಮತ್ತು ಅಲಿಸನ್‌ ವಿಲಿಯಮ್ಸ್‌ ಅವರು ಎಲ್ಲ 23 ವರ್ಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರಗಳನ್ನು ಪ್ರಕಟಿಸಿದರು. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 12ರಂದು ನಡೆಯಲಿದೆ.

‘ಟೆಲ್‌ ಇಟ್‌ ಲೈಕ್ ಎ ವುಮೆನ್‌’ ಚಿತ್ರದ ‘ಅಪ್ಲಾಸ್‌...’, ‘ಟಾಪ್‌ ಗನ್‌: ಮಾವೆರಿಕ್‌‘ ಚಿತ್ರದ ‘ಹೋಲ್ಡ್‌ ಮೈ ಹ್ಯಾಂಡ್..’, ಬ್ಲಾಕ್ ಪ್ಯಾಂಥರ್, ವಕಾಂಡಾ ಫಾರ್ ಎವೆರ್ ಚಿತ್ರದ  ‘ಲಿಫ್ಟ್‌ ಮೀ ಅಪ್‌...’ ಮತ್ತು ‘ಎವೆರಿಥಿಂಗ್‌ ಎವೆರಿವೇರ್ ಆಲ್‌ ಅಟ್‌ ಒನ್ಸ್‌’ ಚಿತ್ರದ ‘ದಿಸ್‌ ಈಸ್‌ ದ ಲೈಫ್‌..’ ಆಸ್ಕರ್ ಪ್ರಶಸ್ತಿಗಾಗಿ ‘ಅತ್ಯುತ್ತಮ ಮೂಲಗೀತೆ ವರ್ಗ’ದಲ್ಲಿ ಸ್ಪರ್ಧೆಯಲ್ಲಿರುವ ಇತರೆ ಗೀತೆಗಳಾಗಿವೆ.

ಆರ್‌ಆರ್‌ಆರ್‌ ಚಿತ್ರದ, ಎಂ.ಎಂ.ಕೀರವಾಣಿ ಅವರು ಸಂಗೀತ ನಿರ್ದೇಶಿಸಿ, ಕಾಲಭೈರವ ಅವರು ಹಾಡಿರುವ ‘ನಾಟು ನಾಟು..’ ಈ ಮೂಲಕ ಮೂರನೇ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಈ ಚಿತ್ರಗೀತೆಗಾಗಿ ಎಂ.ಎಂ.ಕೀರವಾಣಿ ಅವರು ಈಚೆಗೆ ‘ಗೋಲ್ಡನ್‌ ಗ್ಲೋಬ್’ ಮತ್ತು ಕಳೆದ ತಿಂಗಳು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೆ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವರ್ಗದಲ್ಲಿ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗೆ ಆರ್‌ಆರ್‌ಆರ್ ಆಯ್ಕೆಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು