ಹೊಸಪೇಟೆ (ವಿಜಯನಗರ): ‘ಪದವಿ ಪೂರ್ವ’ ಸಿನಿಮಾದಲ್ಲಿ 96–97ನೇ ಇಸ್ವಿಯ ಪ್ರೀತಿ, ಗೆಳೆತನ, ಕೌಟುಂಬಿಕ ಬಾಂಧವ್ಯವನ್ನು ಪ್ರಧಾನವಾಗಿ ತೋರಿಸಲಾಗಿದೆ. ಸಿನಿಮಾ ನೋಡಿದವರಿಗೆಲ್ಲ ಅವರ ಪದವಿಪೂರ್ವದ ದಿನಗಳು ನೆನಪಾಗುತ್ತವೆ’

ಡಿ. 30ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ‘ಪದವಿಪೂರ್ವ’ ಚಿತ್ರದ ನಾಯಕ ಪೃಥ್ವಿ ಶಾಮನೂರ್ ಅವರ ಮಾತುಗಳಿವು. ಸಿನಿಮಾದ ಸಹ ನಟರೊಂದಿಗೆ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಚಿತ್ರದಲ್ಲಿ ನಟಿಸಿದವರೆಲ್ಲ ಹೊಸ ಮುಖಗಳೇ. ಆದರೆ, ಇದಕ್ಕೆ ಆಧಾರ ಸ್ತಂಭವಾಗಿ ನಿಂತವರು ಚಿತ್ರರಂಗದ ಹಿರಿಯರು ಎಂದು ಹೇಳಿದರು.

ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡಿದ್ದು, ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರ್ ಫಿಲ್ಮ್ ಬ್ಯಾನರ್ ಅಡಿ ನಿರ್ಮಾಣಗೊಂಡಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಿದ್ದು, ಅವುಗಳನ್ನೆಲ್ಲ ಯೋಗರಾಜ ಭಟ್ ಅವರೇ ಬರೆದಿದ್ದಾರೆ. ಒಂದು ಬಿಟ್ ಸಾಂಗ್ ಇದೆ. ಅಂಜಲಿ ಅನೀಶ್ ಈ ಚಿತ್ರದ ನಟಿ. ರಂಗಾಯಣ ರಘು, ಶರತ್ ಲೋಹಿತಾಶ್ವ, ಅದಿತಿ ಪ್ರಭುದೇವ ಸೇರಿದಂತೆ ಒಟ್ಟು 20 ಜನ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಬೆಂಗಳೂರು, ಶಿವಮೊಗ್ಗ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟು ₹3 ಕೋಟಿಯಲ್ಲಿ ಸಿನಿಮಾ ತಯಾರಾಗಿದೆ. ಒಟ್ಟು 2.10 ನಿಮಿಷ ಚಿತ್ರದ ಅವಧಿ ಇದೆ. ಡಿಸೆಂಬರ್ 30ರಂದು ರಾಜ್ಯದ 150 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ. ಚಿತ್ರದ ನಿರ್ಮಾಣದಲ್ಲಿ ಹಿರಿಯ ತಂತ್ರಜ್ಞರೆಲ್ಲ ಕೆಲಸ ಮಾಡಿದ್ದಾರೆ. ಹೊಸ ಮುಖಗಳೇ ಸಿನಿಮಾದಲ್ಲಿ ಹೆಚ್ಚಿವೆ. ಪ್ರತಿಯೊಬ್ಬರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಚಿತ್ರತಂಡದ ವಿಜೇಶ್ ಅರಕಲಗೂಡು, ರಜನೀಶ್, ವೆಂಕಟ್, ಸುಶ್ಮಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.