ಶನಿವಾರ, ಜನವರಿ 18, 2020
20 °C

ಇದೇ 12ರಂದು ಜೀ ಕನ್ನಡದಲ್ಲಿ ‘ಪೈಲ್ವಾನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಚ್ಚ ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗವಾಗಿ ಜೀ ಕನ್ನಡ ವಾಹಿನಿ, ಚಲನಚಿತ್ರಗಳ ಟಿವಿ ಪ್ರಸಾರದಲ್ಲಿ ಎರಡು ಮಹತ್ಮದ ದಾಖಲೆಗಳನ್ನು ಮಾಡಿದೆ. ಇಲ್ಲಿಯವರೆಗಿನ ಕನ್ನಡದ ಸಿನಿಮಾಗಳ ಪೈಕಿ ಗರಿಷ್ಠ ಟಿವಿಆರ್‌(21 ಟಿವಿಆರ್‌) ಗಳಿಸಿದ ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ದೊಡ್ಮನೆ ಹುಡುಗ’ ಮತ್ತು ಇತ್ತೀಚೆಗೆ ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ಕುರುಕ್ಷೇತ್ರ’ ಚಿತ್ರವನ್ನು ವಾಹಿನಿ ಪ್ರಸಾರ ಮಾಡಿತ್ತು. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ಪೈಲ್ವಾನ್‌’. 

ನಾಲ್ಕು ಭಾಷೆಗಳಲ್ಲಿ ತೆರೆಕಂಡು, ಭರ್ಜರಿ ಯಶಸ್ಸು ಕಂಡಿರುವ ‘ಕಿಚ್ಚ’ ಸುದೀಪ್‌ ನಟಿಸಿರುವ ‘ಪೈಲ್ವಾನ್‌’ ಸಿನಿಮಾ ಇದೇ ಭಾನುವಾರ ಜನವರಿ 12ರಂದು, ಸಂಜೆ 7ಕ್ಕೆ ಪ್ರಸಾರವಾಗಲಿದೆ. ಕನ್ನಡದ ಬಿಗ್‌ ಬಜೆಟ್‌ನ ‘ಪೈಲ್ವಾನ್‌’ ಸಿನಿಮಾವನ್ನು ಈಗಾಗಲೇ ಥಿಯೇಟರ್‌ನಲ್ಲಿ ಸವಿದಿರುವ ಚಿತ್ರರಸಿಕರು ಮತ್ತೊಮ್ಮೆ ಟಿವಿಯಲ್ಲಿ ಕುಟುಂಬ ಸಮೇತ ನೋಡಿ ಆನಂದಿಸಲಿದ್ದಾರೆ.

ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ನಿರ್ದೇಶಿಸಿರುವ ಕೃಷ್ಣ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ದೊಡ್ಡ ಆ್ಯಕ್ಷನ್‌ ಎಂಟರ್‌ಟೈನರ್‌ ಚಿತ್ರ ‘ಪೈಲ್ವಾನ್‌’. ಈ ಸಿನಿಮಾ ಮೂಲಕ ಬಾಲಿವುಡ್‌ನ ಖ್ಯಾತ ನಟ ಸುನೀಲ್‌ ಶೆಟ್ಟಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್‌ ಜೊತೆ ಬಾಲಿವುಡ್‌ ನಟಿ ಆಕಾಂಕ್ಷ ಸಿಂಗ್‌ ರೊಮ್ಯಾನ್ಸ್‌ ದೃಶ್ಯಗಳಲ್ಲಿ ಕಚಗುಳಿ ಇಡಲಿದ್ದಾರೆ.

ಕಬೀರ್‌ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅಪ್ಪಣ್ಣ ಸೇರಿದಂತೆ ದೊಡ್ಡ ತಾರಾಬಳಗವಿದೆ. ‘ಪೈಲ್ವಾನ್‌’ ಸಿನಿಮಾ ಇದೇ ಭಾನುವಾರ ಜ.12ರಂದು ಸಂಜೆ 7ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು