ಸೋಮವಾರ, ಜೂನ್ 21, 2021
21 °C

ಸುಶಾಂತ್‌ ಸಿಂಗ್‌ ಬಯೋಪಿಕ್‌ನಲ್ಲಿ ನಟಿಸ್ತಾರಂತೆ ಪಾಕಿಸ್ತಾನದ ಈ ನಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಕಳೆದ ಜೂನ್‌ 14ರಂದು ಮುಂಬೈನ ತಮ್ಮ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮತ್ತೊಂದೆಡೆ ಬಾಲಿವುಡ್‌ನ ಅಸಲಿ ಮುಖವನ್ನು ತೆರೆದಿಟ್ಟಿದ್ದು ಪ್ರತಿದಿನವೂ ನಟ, ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ಮುಳುಗೇಳುತ್ತಿದ್ದಾರೆ.

ನಿನ್ನೆ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಪಟ್ನಾದಲ್ಲಿ ದಾಖಲಾಗಿರುವ ಎಫ್‌ಐಆರ್‌ ಅನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ಈ ನಡುವೆಯೇ ಸುಶಾಂತ್‌ ಸಿಂಗ್‌ ಅವರ ಬಯೋಪಿಕ್‌ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆ. ಅವರ ಬಯೋಪಿಕ್‌ ನಿರ್ಮಾಣವಾಗುತ್ತಿರುವುದು ವೆಬ್‌ ಸರಣಿಯಲ್ಲಿ. ಅಂದಹಾಗೆ ಇದರಲ್ಲಿ ಸುಶಾಂತ್‌ ಸಿಂಗ್‌ ಪಾತ್ರದಲ್ಲಿ ನಟಿಸಲು ಸಜ್ಜಾಗುತ್ತಿರುವುದು ಪಾಕಿಸ್ತಾನದ ನಟ ಹಸನ್‌ ಖಾನ್! ಅವರೇ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುಶಾಂತ್‌ ಮತ್ತು ತಮ್ಮ ಫೋಟೊದ ಜೊತೆಗೆ ಈ ಮಾಹಿತಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

SU.SHHANT @sushantsinghrajput #comingsoon‼️ #sushantsinghrajput

A post shared by Hasan Khan (@hasan.khanofficial) on

‘ಭಾರತೀಯ ವೆಬ್‌ ಸರಣಿಯಲ್ಲಿ ನಟ ಸುಶಾಂತ್‌ ಸಿಂಗ್ ರಜಪೂತ್ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ವೆಬ್‌ ಸರಣಿ ವಿರುದ್ಧ ಈಗಾಗಲೇ ಅಪಸ್ವರವೂ ಎದ್ದಿದೆ. ಸುಶಾಂತ್‌ ಸಾವಿನ ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವೆಯೇ ಅವರ ಜೀವನಚರಿತ್ರೆ ಕುರಿತು ವೆಬ್‌ ಸರಣಿ ನಿರ್ಮಾಣವಾಗುತ್ತಿರುವುದು ಸರಿಯಲ್ಲ. ಇನ್ನೂ ಪ್ರಕರಣ ತನಿಖೆಯ ಹಂತದಲ್ಲಿದೆ. ವೆಬ್‌ ಸರಣಿ ನಿರ್ಮಿಸಿದರೆ ನ್ಯಾಯಾಂಗ ನಿಂದನೆಯೂ ಆಗಲಿದೆ ಎಂಬುದು ಸುಶಾಂತ್‌ ಸಿಂಗ್ ಅವರ ಅಭಿಮಾನಿಗಳ ಹೇಳಿಕೆಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು