ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಶ್ ಜೊತೆಯಲ್ಲಿ ಪವಿತ್ರಾ ಲೋಕೇಶ್‌: ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ರಮ್ಯಾ

Last Updated 3 ಜುಲೈ 2022, 11:42 IST
ಅಕ್ಷರ ಗಾತ್ರ

ಮೈಸೂರು: ‘ಚಲನಚಿತ್ರ ನಟಿ ಪವಿತ್ರಾ ಲೋಕೇಶ್ ತಮ್ಮ ಪತಿ, ತೆಲುಗು ಚಿತ್ರನಟ ನರೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿ ರಮ್ಯಾ ರಘುಪತಿ ಎಂಬುವರು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನರೇಶ್–ಪವಿತ್ರಾ ಲೋಕೇಶ್‌ ತಂಗಿದ್ದ ಹೋಟೆಲ್‌ ಕೊಠಡಿ ಬಳಿ ಘಟನೆ ನಡೆದಿದೆ.

ಹೋಟೆಲ್‌ ಕೊಠಡಿಯಿಂದ ನರೇಶ್ ಜೊತೆ ಹೊರ ಬಂದ ಪವಿತ್ರಾ ಮೇಲೆ ಚಪ್ಪಲಿಯಿಂದ ಹೊಡೆಯಲು ಮುಂದಾದ ರಮ್ಯಾ ಅವರನ್ನು ಪೊಲೀಸರು ತಡೆದರು. ತನ್ನನ್ನು ಏಕವಚನದಲ್ಲಿ ನಿಂದಿಸಿದ ರಮ್ಯಾ ಅವರಿಗೆ ‘ನೀನ್ಯಾವಳೇ’ ಎಂದು ಪವಿತ್ರಾ ತಿರುಗೇಟು ನೀಡಿದರು.

ಲಿಫ್ಟ್‌ ಕಡೆಗೆ ಹೋಗುವಾಗ ನರೇಶ್ ರಮ್ಯಾ ಅವರನ್ನು ಅಣಕಿಸುತ್ತಾ ಸಾಗಿದರು. ವಿಜಯದ ಸಂಕೇತ ತೋರಿಸುತ್ತಾ, ಸಿಳ್ಳೆ ಹಾಕುತ್ತಾ, ಕುಹಕದಿಂದ ನಗುತ್ತಾ ತೆರಳಿದರು. ‘ಮೋಸಗಾತಿ’, ‘ವಂಚಕಿ ನೀನು’ ಎಂದು ಇಂಗ್ಲಿಷ್‌ನಲ್ಲಿ ಕೂಗಿ ಹೇಳುತ್ತಾ, ಡ್ಯಾನ್ಸ್ ಮಾಡುತ್ತಾ ಹೋಟೆಲ್‌ನಿಂದ ಹೊರಬಂದರು. ಒಂದೇ ಕಾರ್‌ನಲ್ಲಿ ಪವಿತ್ರಾ ಜೊತೆ ನಿರ್ಗಮಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮ್ಯಾ, ‘ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ನಾನು–ಪವಿತ್ರಾ ಒಳ್ಳೆಯ ಸ್ನೇಹಿತರು ಎಂದು ವಾಹಿನಿಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಸ್ನೇಹಿತರಾದವರು ಇಡೀ ರಾತ್ರಿ ಒಂದೇ ಕೊಠಡಿಯಲ್ಲಿರುತ್ತಾರೆ ಎಂದರೆ ಏನರ್ಥ?’ ಎಂದು ಕೇಳಿದರು.

‘ನನಗೆ ಅನುಮಾನ ಇದ್ದಿದ್ದರಿಂದಲೇ ಅವರ ಬಣ್ಣ ಬಯಲು ಮಾಡಲೆಂದೇ ಇಲ್ಲಿಗೆ ಬಂದಿದ್ದೆ. ಅವರು ಕೊಠಡಿಯಿಂದ ಹೊರಬರುವವರೆಗೂ ಕಾದಿದ್ದೆ. ಪತಿ ನನಗೆ ಡಿವೋರ್ಸ್ ನೋಟಿಸ್‌ ಕಳುಹಿಸಿದ್ದಾರೆ. ಕಾನೂನು ಮೂಲಕ ಹೋರಾಡುತ್ತೇನೆ. ಮಗ ಅಪ್ಪ ಬೇಕು ಎಂದು ಅಳುತ್ತಿದ್ದಾನೆ. ನರೇಶ್‌ಗೆ ಇನ್ನಾದರೂ ಬುದ್ಧಿ ಬರಲಿ; ನಮ್ಮನ್ನು ಕೂಡಿಕೊಳ್ಳಲಿ’ ಎಂದು ಕಣ್ಣೀರಿಟ್ಟರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT