ಸಮಾಜದಲ್ಲಿ ಸದ್ದು–ಗದ್ದಲ ಮೂಡಿಸಿದ ಪ್ರಕರಣಗಳು ಚಿತ್ರವಾಗಿ ಘೋಷಣೆಯಾಗುವುದು ಹೊಸತೇನಲ್ಲ. ಆದರೆ ಕೆಲವು ಘೋಷಣೆ, ಪೋಸ್ಟರ್‌ಗೆ ಸೀಮಿತವಾಗಿಬಿಡುತ್ತವೆ! ಸದ್ಯ ‘ಪೆನ್‌ಡ್ರೈವ್’ ಸಾಕಷ್ಟು ಸದ್ದು ಮಾಡುತ್ತಿದೆ. ಅದನ್ನೇ ಶೀರ್ಷಿಕೆಯಾಗಿಸಿಕೊಂಡು ಸಿನಿಮಾವೊಂದು ಸೆಟ್ಟೇರಲು ಸಿದ್ಧವಾಗಿದೆ.

ಈ ಹಿಂದೆ ‘ಪಾತರಗಿತ್ತಿ’ ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೂಪರ್ ಮೂವೀಸ್ ಮೇಕರ್ಸ್ ಅಡಿಯಲ್ಲಿ ಲೋಕೇಶ್.ಆರ್ ಬಂಡವಾಳ ಹೂಡುತ್ತಿದ್ದಾರೆ. ‘ದೊಡ್ಡವರಲ್ಲ ಜಾಣರಲ್ಲ’ ಎಂಬ ಅಡಿಬರಹವಿದೆ.

‘ಶೀರ್ಷಿಕೆಗೂ ಕಥೆಗೂ ಏನು ಸಂಬಂಧ? ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಜೈಲು ಊಟವೂ ಇರುತ್ತದೆ, ಕೋರ್ಟುಮ ಕಚೇರಿಗಳು ಕಥೆಯಲ್ಲಿ ಬರುತ್ತವೆ. ಒಟ್ಟಿನಲ್ಲಿ ಎಲ್ಲರೂ ಊಹಿಸುವಂತಹ ಪಾತ್ರಗಳು ಬರುತ್ತದೆ. ಪೆನ್ ಡ್ರೈವ್ ಎನ್ನುವುದು ಒಂದು ವಿಶ್ವ. ಅದರೊಳಗಡೆ ಏನನ್ನಾದರೂ ತುಂಬಿಸಬಹುದು. ಆದರೆ ಅದರ ಒಳಗಡೆ ಜನರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಾದ ವಿಷಯಗಳು ಇರುತ್ತವೆ. ದೊಡ್ಡವರು ಅಥವಾ ಚಿಕ್ಕವರಿರಬಹುದು. ಸಮಾಜದ ಎಲ್ಲಾ ಮುಖಗಳು ಸಿಗುತ್ತದೆ’ ಎಂದರು ನಿರ್ದೇಶಕರು.
ಬೆಂಗಳೂರು, ಬಳ್ಳಾರಿ, ಹಾಸನ, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಹಂಸರಾಗ ಸಂಗೀತ, ವಿಜಯ್ ರಾಘವ್ ಛಾಯಾಚಿತ್ರಗ್ರಹಣ, ಜೀವನ್‌ರಾಂ ಸಂಕಲನ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.