ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಪುತ್ರ, ನಟ ವಿನಯ್ ರಾಜ್ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಲುಂಗಿಯುಟ್ಟುಕೊಂಡು, ಕೈಯಲ್ಲಿ ಮಚ್ಚು ಹಿಡಿದು ‘ರಾ’ ಲುಕ್ನಲ್ಲಿ ವಿನಯ್ ಕಾಣಿಸಿಕೊಂಡಿದ್ದಾರೆ.

ಪಿಆರ್ಕೆ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘Emotions don't mean anything in rivalry’ ಎನ್ನುವ ಟ್ಯಾಗ್ಲೈನ್ನಲ್ಲಿ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ‘ವಿನಯ್ ರಾಜ್ಕುಮಾರ್ ಅವರು ಈ ಸಿನಿಮಾದಿಂದ ಚಿತ್ರರಂಗದಲ್ಲಿ ಇನ್ನೊಂದು ಹಂತಕ್ಕೆ ಏರುತ್ತಾರೆ’ ಎನ್ನುವಂಥ ಮಾತುಗಳು ಪ್ರೇಕ್ಷಕರಿಂದ ಕೇಳಿಬರುತ್ತಿದೆ. ಹಳ್ಳಿ ಸೊಗಡಿನ ಈ ಸಿನಿಮಾ ಸಂಪೂರ್ಣ ಆ್ಯಕ್ಷನ್ನಿಂದ ಕೂಡಿದ್ದು, ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್ಸ್ಟರ್ಗಳ ಕಥೆಯಾಗಿದೆ. ಚಿತ್ರದ ಹಿನ್ನೆಲೆ ಸಂಗೀತವೂ ಸೆಳೆಯುವಂತಿದೆ. ಶ್ರೀಲೇಶ್ ಎಸ್. ನಾಯರ್ ನಿರ್ದೇಶನದ ಈ ಸಿನಿಮಾವನ್ನು ಉದಯ್ ಶಂಕರ್ ಎಸ್. ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದೆ. ವಿನಯ್ ಅವರ ಈ ಹಿಂದಿನ ಸಿನಿಮಾಗಳಲ್ಲಿನ ಪಾತ್ರಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿರುವ ಪಾತ್ರ ‘ಪೆಪೆ’ಯಲ್ಲಿ ಕಾಣಿಸುತ್ತಿದೆ.

2018ರಲ್ಲಿ ತೆರೆಕಂಡ ‘ಅನಂತು v/s ನುಸ್ರತ್’ ಬಳಿಕ ವಿನಯ್ ರಾಜ್ಕುಮಾರ್ ಅವರ ಸಿನಿಮಾಗಳು ತೆರೆಕಂಡಿಲ್ಲ. ಸದ್ಯಕ್ಕೆ ‘ಪೆಪೆ’, ‘ಗ್ರಾಮಾಯಣ’, ‘ಅಂದೊಂದಿತ್ತು ಕಾಲ’ ಸಿನಿಮಾಗಳ ಬಿಡುಗಡೆಗಾಗಿ ವಿನಯ್ ಅವರು ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.