ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌15ಕ್ಕೆ ಫೋಟೋ ಸಿನಿಮಾ ಬಿಡುಗಡೆ; ನಟ ಪ್ರಕಾಶ್ ರಾಜ್ ಏನಂದ್ರು?

Published 11 ಮಾರ್ಚ್ 2024, 12:59 IST
Last Updated 11 ಮಾರ್ಚ್ 2024, 12:59 IST
ಅಕ್ಷರ ಗಾತ್ರ

ಉತ್ಸವ್ ಗೋನವಾರ ನಿರ್ದೇಶನದ ‘ಫೋಟೋ’ ಸಿನಿಮಾ ಮಾರ್ಚ್‌ 15ರಂದು ತೆರೆಕಾಣುತ್ತಿದ್ದು, ಚಿತ್ರತಂಡವು ಮಲ್ಟಿಪ್ಲೆಕ್ಸ್‌ ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ ₹150 ನಿಗದಿಪಡಿಸಿದೆ.   

‘ಫೋಟೋ’ ಸಿನಿಮಾವನ್ನು ನಿರ್ದಿಗಂತದ ಮೂಲಕ ನಟ ಪ್ರಕಾಶ್ ರಾಜ್ ಪ್ರಸೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ‘ನಿಮ್ಮ ಸಂಗ’ ಎಂಬ ಹಾಡನ್ನು ಚಿತ್ರತಂಡ ಅನಾವರಣ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್‌ ರಾಜ್‌, ‘ಯುವಕರು ಗ್ಲ್ಯಾಮರ್‌ ಲೋಕಕ್ಕೆ ಇಳಿಯುತ್ತಿದ್ದಾರೆ, ಹಾಳಾಗುತ್ತಿದ್ದಾರೆ ಎನ್ನುವ ಕಾಲಘಟ್ಟದಲ್ಲಿ ಇಂತಹ ಪ್ರಾಮಾಣಿಕ, ಜವಾಬ್ದಾರಿಯುತ ಯುವ ನಿರ್ದೇಶಕರು ಬರುತ್ತಿದ್ದಾರೆ. ಈ ಸಿನಿಮಾ ಪ್ರಸೆಂಟ್‌ ಮಾಡುವುದರ ಹಿಂದೆ ಯಾವುದೇ ವ್ಯಾಪಾರ, ರಾಜಕೀಯದ ಆಸಕ್ತಿ ಇಲ್ಲ. ಈ ಸಿನಿಮಾ ಜನರನ್ನು ತಲುಪಬೇಕು. ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕೇವಲ ಒಂದು ಏಕಪರದೆ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಏಕಪರದೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬಹುದು. ಮಾರ್ಚ್‌ 22ರ ನಂತರ ಉತ್ತರ ಕರ್ನಾಟಕದ ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ. ಟಿಕೆಟ್‌ ದರವನ್ನು ₹150 ನಿಗದಿಪಡಿಸಲಾಗಿದೆ’ ಎಂದರು.    

‘ಸಿನಿಮಾ ಬಿಡುಗಡೆ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಅವರು ಬಂದಿದ್ದು ನಮಗೆ ದೊಡ್ಡ ಶಕ್ತಿ. ನನ್ನ ಹಾಗೆ ಸಿನಿಮಾ ಮಾಡುವವರಿಗೆ ನಂಬಿಕೆ ಮೂಡುತ್ತದೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ರಾಜ್‌ ಅವರು ಧೈರ್ಯ ಕೊಟ್ಟಿದ್ದಾರೆ’ ಎನ್ನುತ್ತಾರೆ ಉತ್ಸವ್‌. 

‘ನಿಮ್ಮ ಸಂಗ’ ಎಂಬ ಜನಪದ ಶೈಲಿಯ ಹಾಡು ‘ಫೋಟೋ’ ಸಿನಿಮಾದ ಅಂತರಂಗ ಬಿಚ್ಚಿಟ್ಟಿದ್ದು, ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲ್ಪಾ ಮುಡುಬಿ ಧ್ವನಿಯಾಗಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ಮತ್ತು ವೀರೇಶ್ ಗೊನ್ವಾರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಛಾಯಾಚಿತ್ರಗ್ರಹಣ, ರವಿ ಹಿರೇಮಠ್ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನವಿದೆ. 

ಫೋಟೋ ಸಿನಿಮಾ ಸ್ಟಿಲ್‌

ಫೋಟೋ ಸಿನಿಮಾ ಸ್ಟಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT