ನವದೆಹಲಿ:ವಿಶ್ವಸುಂದರಿ ಐಶ್ವರ್ಯಾ ರೈ ಅವರ ಹಳೇ ಚಿತ್ರವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಭಾರಿ ಪ್ರಶಂಸೆಗೂ ಪಾತ್ರವಾಗಿದೆ.

ವಿಶ್ವಸುಂದರಿ ಸ್ಪರ್ಧೆ ಗೆದ್ದು ಬಂದು ತಾಯಿಯೊಂದಿಗೆ ನೆಲದ ಮೇಲೆ ಕುಳಿತು
ಭೋಜನ ಸವಿಯುತ್ತಿರುವ ಐಶ್ವರ್ಯಾ ರೈ

1994ರಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ನಟಿ ಐಶ್ವರ್ಯಾ ರೈ ಅವರು ವಿಜೇತರಾಗಿದ್ದರು. ಅಂದು, ಭುವನ ಸುಂದರಿ ಕಿರೀಟವನ್ನು ತೊಡಿಸಿಕೊಂಡಿದ್ದ ಐಶ್ವರ್ಯಾ, ಅದನ್ನು ಮುಡಿಯಲ್ಲಿಟ್ಟುಕೊಂಡೇ ಸರಳವಾಗಿ ಊಟ ಮಾಡುತ್ತಿದ್ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಜಗತ್ತಿನ ಅತಿ ದೊಡ್ಡ ಸ್ಪರ್ಧೆಯನ್ನು ಆಗಷ್ಟೇ ಗೆದ್ದು ಬಂದಿದ್ದ ಐಶ್ವರ್ಯ ರೈ, ಯಾವ ಹಮ್ಮುಬಿಮ್ಮೂ ಇಲ್ಲದೇ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವುದು, ಅವರ ಪಕ್ಕದಲ್ಲೇ ಕುಳಿತು ತಾಯಿ ಬೃಂದಾ ರೈ ಅವರೂ ಊಟ ಮಾಡುತ್ತಿರುವುದು ಚಿತ್ರದಲ್ಲಿದೆ.

ಸದ್ಯ ಈ ಫೋಟೊ ಐಶ್ವರ್ಯಾ ರೈ ಅವರಿಗೆ ಭಾರಿ ಮೆಚ್ಚುಗೆ ತಂದು ಕೊಟ್ಟಿದೆ. ಅವರ ರೂಪ ಲಾವಣ್ಯದ ಜೊತೆಗೆ ಅವರ ಸರಳತೆಯನ್ನೂ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ‘ಅತ್ಯಂತ ವಿನಮ್ರ ಸುಂದರಿ, ರಾಣಿ,’ ಎಂಬ ಪ್ರಶಂಸೆಗಳು ಐಶ್ವರ್ಯಾ ಅವರಿಗೆ ಸಿಕ್ಕಿವೆ.

1994ರ ನವೆಂಬರ್‌ನಲ್ಲಿದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 44ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ21 ವರ್ಷ ಪ್ರಾಯದ ಐಶ್ವರ್ಯಾ ರೈ ಅವರು ವಿಜೇತರಾಗಿದ್ದರು. ಆ ವರ್ಷ ಜಗತ್ತಿನ ಹಲವು ದೇಶಗಳ87 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.