ಶುಕ್ರವಾರ, ಮಾರ್ಚ್ 31, 2023
22 °C

2023ರ ಏಪ್ರಿಲ್‌ನಲ್ಲಿ ಪೊನ್ನಿಯಿನ್‌ ಸೆಲ್ವನ್‌–2 ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವರ್ಷ ಸೆಪ್ಟೆಂಬರ್‌ ಅಂತ್ಯದಲ್ಲಿ ತೆರೆ ಕಂಡು ಭರ್ಜರಿ ಯಶಸ್ಸು ಸಾಧಿಸಿದ್ದ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೆಲ್ವನ್‌ ಚಿತ್ರದ ಎರಡನೇ ಭಾಗ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಈ ವರ್ಷ ಏಪ್ರಿಲ್‌ 28ರಂದು ಪೊನ್ನಿಯಿನ್‌ ಸೆಲ್ವನ್‌–2 ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಹೇಳಿದೆ. 

ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ, ಜಯರಾಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಪೊನ್ನಿಯಿನ್‌ ಸೆಲ್ವನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನೋಡುಗರು ಚಿತ್ರವನ್ನು ದೃಶ್ಯವೈಭವ ಎಂದೇ ಬಣ್ಣಿಸಿದ್ದರು. ಗಳಿಕೆಯಲ್ಲೂ ಭರ್ಜರಿ ಯಶಸ್ಸು ದಾಖಲಿಸಿದ ಚಿತ್ರವನ್ನು ಎರಡು ಭಾಗಗಳಲ್ಲಿ ಶೂಟಿಂಗ್‌ ಮಾಡಿರುವುದಾಗಿ ಚಿತ್ರತಂಡ ಈ ಹಿಂದೆಯೇ ಹೇಳಿತ್ತು. 

2019ರಿಂದ 150 ದಿನಗಳ ಕಾಲ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಿಸಲಾಗಿದೆ ಎಂದು ನಟ ಜಯರಾಂ ರವಿ ಸಂದರ್ಶನವೊಂದರಲ್ಲಿ ಹೇಳಿದ್ದರು. 1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ ಪೊನ್ನಿಯಿನ್‌.  ಮಣಿರತ್ನಂ ಸುಂದರ ದೃಶ್ಯಗಳಿಗೆ ತಕ್ಕಂತೆ ಎ.ಆರ್‌.ರೆಹಮಾನ್‌ ಅತ್ಯದ್ಬುತ ಸಂಗೀತ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು