ಸೋಮವಾರ, ಮೇ 23, 2022
30 °C

ಪ್ರಭಾಸ್‌ ಹುಟ್ಟುಹಬ್ಬಕ್ಕೆ ಭರ್ಜರಿ ಪೋಸ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅ. 23ರಂದು ಬಾಹುಬಲಿ ನಟ ಪ್ರಭಾಸ್‌ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಆನ್‌ಲೈನ್‌ನಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾಸ್‌ ಅವರ ಪೋಸ್ಟರ್‌ ರೂಪಿಸಿದ್ದಾರೆ. ಇದು ಅಭಿಮಾನಿಗಳ ಜಾಲತಾಣ ಖಾತೆಗಳ ಸಾಮಾನ್ಯ ಡಿಸ್ಪ್ಲೇ ಪೋಟೋ (ಕಾಮನ್‌ ಡಿಪಿ) ಆಗಿದೆ. #PrabhasBirthdayCDP ಹ್ಯಾಷ್‌ಟ್ಯಾಗ್‌ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಟ್ರೆಂಡ್‌ ಆಗಿದೆ. 

ಪೋಸ್ಟರ್‌ ಹೇಗಿದೆ ಗೊತ್ತಾ?

ಪ್ರಭಾಸ್‌ ಅವರ ದೇಹವನ್ನೇ ಬೃಹತ್‌ ಪರ್ವತದ ರೀತಿ ಬಿಂಬಿಸಿ ಅದರ ತುದಿಯಲ್ಲಿ ಅವರ ಮುಖವಿದೆ. ಆಜಾನುಬಾಹು ದೇಹಿ ನಟ ಇಡೀ ಪರ್ವತದಂತೆ ಭಾಸವಾಗುತ್ತಾರೆ. ಪರ್ವತದ ತಪ್ಪಲಲ್ಲಿ ಸಾವಿರಾರು ಅಭಿಮಾನಿಗಳು ಅಭಿನಂದಿಸುತ್ತಿರುವ ನೋಟ ಪೋಸ್ಟರ್‌ನಲ್ಲಿದೆ. ಪ್ರಭಾಸ್‌ ಟ್ರೆಂಡ್ಸ್‌ನಲ್ಲಿಯೂ ಕೂಡಾ ಈ ಪೋಸ್ಟರ್‌ ಕಾಣಿಸಿಕೊಂಡಿದೆ. 

ಕೆಲವು ಟ್ವೀಟ್‌ ಸ್ಯಾಂಪಲ್‌ಗಳು ಹೀಗಿವೆ: ಪ್ರಭಾಸ್‌ ಟ್ರೆಂಡ್ಸ್‌‌: ಈ ಪರಾಕ್ರಮ ಶಾಲಿ ವ್ಯಕ್ತಿ (ಪ್ರಭಾಸ್‌) ಭಾರತೀಯ ಸಿನಿಮಾ ಎಂಬ ಪರ್ವತದ ತುದಿಯಲ್ಲಿದ್ದಾರೆ. ಅವರು ಭಾರತೀಯ ಸಿನಿಮಾದ ಮುಖವಾಗುತ್ತಿದ್ದಾರೆ ಮತ್ತು ಭಾರತದಾದ್ಯಂದ ಜನರ ಸೂಪರ್‌ಸ್ಟಾರ್‌ ಆಗಿದ್ದಾರೆ. ದೇಶ ಹಾಗೂ ದೇಶದಾಚೆಗೂ ಜನರ ಹೃದಯ ಆಳುತ್ತಾ ಪ್ರೀತಿ ಗೆದ್ದಿದ್ದಾರೆ ಎಂದು ಬರೆದಿದ್ದಾರೆ.

ರಮೇಶ್‌ ಗೋಪಿಶೆಟ್ಟಿ @ಆಲ್ವೇಸ್‌ಫಿಲ್ಮ್‌ ಎಂಬುವವರು ಬರೆದಿದ್ದು ಹೀಗಿದೆ. ಬಹಳ ಸಮಯದಿಂದ ಕಾಯುತ್ತಿದ್ದ ಕಾಮನ್‌ ಡಿಪಿ ಈಗ ಬಂದಿದೆ. ಅಕ್ಟೋಬರ್‌ 23ರ ಪ್ರಭಾಸ್‌ ಅವರ ಹುಟ್ಟುಹಬ್ಬದ ಆಚರಣೆ ಈಗಲೇ ಆರಂಭಿಸೋಣ ಎಂದಿದ್ದಾರೆ.

ಪ್ರಭಾಸ್‌ ಅವರು ರಾಧೆ ಶ್ಯಾಮ ಚಿತ್ರದಲ್ಲಿ ಪೂಜಾ ಹೆಗ್ಡೆ ಅವರೊಂದಿಗೆ ಹೆಜ್ಜೆ ಹಾಕಿರುವ ಪೋಸ್ಟರ್‌ ಕೂಡಾ ಈಗಾಗಲೇ ಹರಿದಾಡುತ್ತಿದೆ. ಆ ಚಿತ್ರವೂ ಬಿಡುಗಡೆಯ ಸಿದ್ಧತೆಯಲ್ಲಿದೆ. ಮುಂದೆ ಪ್ರಭಾಸ್‌ ಅವರು ನಾಗ್‌ ಅಶ್ವಿನ್‌ ಮತ್ತು ಓಂ ರಾವುತ್‌ ಅವರ ಹೊಸ ಚಿತ್ರದ ಯೋಜನೆಯಲ್ಲಿ ನಿರತರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು