ಬೆಂಗಳೂರು: ಖ್ಯಾತ ನಟ ಪ್ರಭಾಸ್ ಅವರ 25 ನೇ ಚಿತ್ರದ ಶಿರ್ಷಿಕೆ ಹೊರ ಬಿದ್ದಿದ್ದು ‘ಸ್ಪಿರಿಟ್’ ಎಂದು ಘೋಷಿಸಲಾಗಿದೆ. 'ಅರ್ಜುನ್ ರೆಡ್ಡಿ'ಹಾಗೂ 'ಕಬೀರ್ ಸಿಂಗ್' ಖ್ಯಾತಿಯನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ.
ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಸ್ವತಃ ಪ್ರಭಾಸ್ ಬರೆದುಕೊಂಡಿದ್ದು, ನನ್ನ 25 ನೇ ಚಿತ್ರ ‘ಸ್ಪಿರಿಟ್’ಎಂದು ಹೇಳಿದ್ದಾರೆ. ಭದ್ರಕಾಳಿ ಬ್ಯಾನರ್ ಅಡಿ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ಟೀ ಸಿರೀಸ್’ನ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ.
ಸ್ಪಿರಿಟ್ ಭಾರತದ ಎಂಟು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ನಾಲ್ಕು ಏಷಿಯನ್ ಭಾಷೆಗಳಲ್ಲೂ ಚಿತ್ರಮಂದಿರಗಳಿಗೆ ಕಾಲಿಡಲಿದೆ ಎನ್ನಲಾಗಿದೆ.
ತೆಲುಗಿನ ಬ್ಲಾಕ್‌ಬಸ್ಟರ್ 'ಅರ್ಜುನ್ ರೆಡ್ಡಿ' ಹಾಗೂ ಹಿಂದಿಯ 'ಕಬೀರ್ ಸಿಂಗ್' ಸಿನಿಮಾಗಳನ್ನು ನಿರ್ದೇಶಿಸಿ ಸಾಕಷ್ಟು ಖ್ಯಾತಿ ಗಳಿಸಿರುವ ವಾಂಗಾ ಅವರ ಮೂರನೇ ಪ್ರಮುಖ ಚಿತ್ರ ಇದಾಗಲಿದೆ. ಸ್ಪಿರಿಟ್‌ನಲ್ಲಿ ಸದ್ಯಕ್ಕೆ ಪ್ರಭಾಸ್ ಹೆಸರು ಮಾತ್ರ ಕಾಣಿಸಿಕೊಂಡಿದ್ದು ಉಳಿದವಿವರಗಳು ಲಭ್ಯವಾಗಿಲ್ಲ.
ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ರಾಧೆ ಶ್ಯಾಮ್ ಜನವರಿ 14 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಪ್ರಭಾಸ್ ಅವರು ‘ಆದಿಪುರುಷ್’ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ನಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.