ಬಾಲಿವುಡ್ನ ಖ್ಯಾತ ನಿರ್ದೇಶಕ ಓಂ ರಾವತ್ ನಿರ್ದೇಶನದ ಬಹುನಿರೀಕ್ಷಿತ ಆದಿಪುರುಷ್ ಚಿತ್ರ ಸೆಟ್ಟೇರಿದೆ. ಈ ವಿಷಯವನ್ನು ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಪ್ರಭಾಸ್ ‘ಆರಂಭ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ಪ್ರಭಾಸ್ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿಖಾನ್ ರಾವಣನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.

ಈ ಪಾತ್ರಕ್ಕೆ ಪ್ರಭಾಸ್ ಅವರನ್ನು ಆಯ್ಕೆ ಮಾಡಿದ್ದ ಬಗ್ಗೆ ಪಿಟಿಐ ಜೊತೆ ಮಾತನಾಡಿದ್ದ ರಾವತ್ ‘ಈ ಪಾತ್ರಕ್ಕೆ ಪ್ರಭಾಸ್ ಸೂಕ್ತ ಎಂದು ನನಗೆ ಅನ್ನಿಸಿತ್ತು. ಅವರ ಸಂಪೂರ್ಣ ವ್ಯಕ್ತಿತ್ವ, ಅವರ ಕಣ್ಣಿನ ಆಳ, ನಿಲುವು ಒಟ್ಟಾರೆ ಅವರು ಆ ಪಾತ್ರಕ್ಕೆ ಹೊಂದುತ್ತಾರೆ. ನಾನು ಅವರಲ್ಲಿ ಆದಿಪುರುಷ್ನನ್ನು ನೋಡುತ್ತೇನೆ. ಅವರಿಲ್ಲದೇ ಈ ಸಿನಿಮಾ ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.

ಆದಿಪುರುಷ್ ಸಿನಿಮಾವನ್ನು ಹಿಂದಿ ಹಾಗೂ ತೆಲುಗಿನಲ್ಲಿ ಶೂಟಿಂಗ್ ಮಾಡಲಿದ್ದು, ಈ ಸಿನಿಮಾ ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ. ಇದು 2022ರ ಆಗಸ್ಟ್ 11ಕ್ಕೆ ಚಿತ್ರ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.