ಬುಧವಾರ, ಮೇ 18, 2022
25 °C

ಪ್ರೇಮಿಗಳ ದಿನಕ್ಕೆ ಸಿನಿಪ್ರಿಯರ ಮುಂದೆ ‘ರಾಧೆ ಶ್ಯಾಮ್‌’ ನೋಟ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್‌’ನ ಟೀಸರ್‌ ಪ್ರೇಮಿಗಳ ದಿನದಂದೇ ಬಿಡುಗಡೆಯಾಗಲಿದೆ.

ಈ ಕುರಿತು ನಟಿ ಪೂಜಾ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟರ್‌ ಅಪ್‌ಲೋಡ್‌ ಮಾಡಿದ್ದು, ಫೆ.14ರಂದು ಬೆಳಗ್ಗೆ 9.18ಕ್ಕೆ ಚಿತ್ರದ ಗ್ಲಿಮ್ಸ್‌ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಪೋಸ್ಟರ್‌ನಲ್ಲಿ ಪ್ರಭಾಸ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಕೇವಲ 2 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್‌ ಮಾಡಿದ್ದಾರೆ.

ಚಿತ್ರಕ್ಕೆ ರಾಧಾ ಕೃಷ್ಣಕುಮಾರ್‌ ಆಕ್ಷ್ಯನ್ ಕಟ್‌ ಹೇಳಿದ್ದು, ಗೋಪಿ ಕೃಷ್ಣ ಮೂವೀಸ್‌, ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್‌ ಈ ಚಿತ್ರ ನಿರ್ಮಿಸುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು